RRR ಸಿನಿಮಾದ ಮೂಲಕ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿರುವ ಜ್ಯೂ. NTR ಸದ್ಯ ಹೈ ಬಜೆಟ್ ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ತಾರಕ್ ಬ್ಯುಸಿಯಾಗಿದ್ದು , ಈ ಪೈಕಿ KGF ಖ್ಯಾತಿಯ ಕನ್ನಡದ ನಿರ್ದೇಶನದ ಪ್ರಶಾಂತ್ ನೀಲ್ ಅವರೊಂದಿಗೂ ಒಂದು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಎಲ್ರಿಗೂ ಗೊತ್ತೇ ಇದೆ..
ಅಲ್ಲದೇ ನಿರ್ದೇಶಕ ಕೊರಟಾಲ ಶಿವ ಜೊತೆಗೂ ಜ್ಯೂ. ಎನ್ ಟಿ ಆರ್ ಸಿನಿಮಾ ಮಾಡ್ತಿದ್ದಾರೆ.. ಈಗ ಮತ್ತೊಬ್ಬ ಸ್ಟಾರ್ ನಿರ್ದೇಶಕರ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾಗೆ ಸಹಿ ಹಾಕಿದ್ದಾರೆ ಯಂಗ್ ಟೈಗರ್ NTR..
ಹೌದು..! ನಿರ್ದೇಶಕ ವೆಟ್ರಿಮಾರನ್ ಚಿತ್ರದಲ್ಲಿ ನಟಿಸಲು ಜ್ಯೂ. NTR ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ವೆಟ್ರಿಮಾರನ್ ಅವರನ್ನ ಸೋಲಿಲ್ಲದ ಸರದಾರ ಅಂತಲೇ ಕರೆಯಬಹುದು.. ಅವರ ಈವರೆಗೂ ಆಕ್ಷನ್ರ ಕಟ್ ಹೇಳಿರುವ ಸಿನಿಮಾಗಳೆಲ್ಲವೂ ಹಿಟ್ ಆಗಿವೆ..