Kabzaa Trailer : ಉಪ್ಪಿ – ಕಿಚ್ಚ ಕಮಾಲ್, ಕಬ್ಜಾ ಟ್ರೈಲರ್ ಗೆ ಪ್ರೇಕ್ಷಕ ಫಿಧಾ…
ಆರ್. ಚಂದ್ರು ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಕ್ವಾಲಿಟಿ, ವಿಶೂಯಲ್ , BGM, ಎಲ್ಲವೂ ಅಬ್ಬ ಎನಿಸುವ ಮಟ್ಟಿಗೆ ಕಾಣಿಸುತ್ತಿದೆ.
ಟ್ರೈಲರ್ ನಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ತಮ್ಮ ಲುಕ್ ಮತ್ತು ಮ್ಯಾನರಿಸಂನಿಂದ ಗಮನಸೆಳೆದಿದ್ದಾರೆ. ಘಟಾನುಘಟಿ ನಾಯಕರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಸಣ್ಣ ಝಲಕ್ ಕೂಡ ಬಿಡುಗಡೆಯಾಗಿದೆ. ಆದರೇ ಸಂಪೂರ್ಣ ಲುಕ್ ಅನ್ನ ತೋರ್ಪಡಿಸಿಲ್ಲ. ಮೊದಲಿಗೆ ಹಿಂದಿಯಲ್ಲಿ ಟ್ರೈಲರ್ ಅನ್ನ ರಿಲೀಸ್ ಮಾಡಲಾಯಿತು. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಬ್ಜಾ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದಾರೆ. ಕನ್ನ ಡ ಮತ್ತು ಬೇರೆ ಭಾಷೆಯಗಳಲ್ಲಿ ತಡರಾತ್ರಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ.
ಇಲ್ಲಿಯವರೆಗಿನ ಟೀಸರ್ ಮತ್ತು ಪೋಸ್ಟರ್ ಗಳಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಈ ಟ್ರೈಲರ್ ನಲ್ಲಿ ಏರ್ಫೋರ್ಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರದ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇನ್ನೂ ಚಿತ್ರದಲ್ಲಿ ತೆಲುಗು ಬಾಲಿವುಡ್ ಕಲಾವಿದರು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಸೊಶಿಯಲ್ ಮೀಡಿಯಾ ವಿಮರ್ಶೆಗಳು ಕೂಡು ಪಾಸಿಟೀವ್ ರೆಸ್ಪಾನ್ಸ್ ಕೊಟ್ಟಿದ್ದಾರೆ.
Kabzaa Trailer : The much awaited pan India movie Kabza trailer is out