Bhuban badyakar | ಕಚ್ಚಾ ಬಾದಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲು Kacha Badam singer Bhuban Badyakar hospitalised saaksha tv
ಕೋಲ್ಕತ್ತಾ : ರಾತ್ರೋರಾತ್ರಿ ಸ್ಟಾರ್ ಆಗಿ ಗುರುತಿಸಿಕೊಂಡ ಕಚ್ಚಾ ಬಾದಮ್ ಸಿಂಗರ್ ಭುಬನ್ ಬದ್ಯಾಕರ್, ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭುಬನ್ ಅವರು ಇತ್ತೀಚೆಗೆ ಕಾರೊಂದನ್ನು ಖರೀದಿ ಮಾಡಿದ್ದರು. ಈ ಕಾರಿನಲ್ಲಿ ಡ್ರೈವಿಂಗ್ ಕಲಿಯುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಪರಿಣಾಮ ಭುಬನ್ ಅವರ ಎದೆ ಭಾಗಕ್ಕೆ ಏಟು ಬಿದ್ದಿದೆ.
ಕೂಡಲೇ ಅವರನ್ನ ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದೆ.
ಕಡಲೆ ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಕಚ್ಚಾ ಬದಾಮ್ ಹಾಡಿನ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಇವರ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡು ಮಾಡುತ್ತಿದೆ. Kacha Badam singer Bhuban Badyakar hospitalised