ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆ
ಕಲಬುರಗಿ: 3 ತಿಂಗಳ ಹಿಂದೆಯಷ್ಟೇ ಪ್ರೀತಿಸಿದವನ ಜೊತೆಗೆ ಮದುವೆಯಾಗಿದ್ದ 23 ವರ್ಷದ ನವವಿವಾಹಹಿತೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿಯ ರಾಜಾಪೂರ ಬಡಾವಣೆಯಲ್ಲಿ ನಡೆದಿದೆ. ರಮಾಬಾಯಿ(23) ಎಂಬಾಕೆ ಮೃತ ಮಹಿಳೆಯಾಗಿದ್ದು, ಈಕೆ ರಾಹುಲ್ ಎಂಬ ಯುವಕನನ್ನು ಪ್ರೀತಿಸಿ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು. ಪ್ರೀತಿಸಿ ಮನೆಯಿಂದ ರಮಾಬಾಯಿಯನ್ನು ಕರೆದೊಯ್ದು ಹೋಗಿ ರಾಹುಲ್ ಮದುವೆಯಾಗಿದ್ದನು.
ಮದುವೆಯ ನಂತರ ಅತ್ತೆ ಮನೆಯವರು ರಮಾಬಾಯಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅನ್ಯ ಜಾತಿಯವಳಾಗಿದ್ದ ಕಾರಣಕ್ಕೆ ಯುವತಿಯನ್ನ ನಿಂದನೆ, ಕಿರುಕುಳ ಕೊಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಮಾಬಾಯಿಯನ್ನು ಗಂಡನ ಮನೆಯವರೇ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೀಪಾವಳಿ ಪಾರ್ಟಿ ವೇಳೆ ಬಾಲಕನಿಂದ ಬಾಲಕಿ ಮೇಲೆ ಅತ್ಯಾಚಾರ ಯತ್ನ