ಕಲಬುರಗಿ : ಅನಾಥವಾಯ್ತಾ ಕೆಸರಟಗಿ ಉದ್ಯಾನ..?
ಸರಿಯಾದ ನಿರ್ವಹಣೆ ಇಲ್ಲದೆ ಕಲಬುರ್ಗಿ ನಗರದ ಹೊರವಲಯದಲ್ಲಿನ ಕೆಸರಟಗಿ ಉದ್ಯಾನ ಅನಾಥವಾಗಿದೆ. ಹಗಲಿನಲ್ಲೇ ಪಾಳು ಬಿದ್ದಂತ ಸ್ಮಶಾನದಂತೆ ಉದ್ಯಾನ ಭಾಸವಾಗುತ್ತಿದೆ.
ಒಣ ಹುಲ್ಲಿನ ರಾಶಿ, ಒಣಗುತ್ತಿರುವ ಗಿಡಮರಗಳು, ತುಕ್ಕು ಹಿಡಿದಿರುವ ಮಕ್ಕಳ ಆಟಿಕೆಗಳು, ಇಂದೋ ನಾಳೆ ಬೀಳುವಂತಿರುವ ಜಿಂಕೆ, ಡೈನೋಸಾರ್ ಪ್ರತಿಮೆಗಳು ಇದು ಕೆಸರಟಗಿ ಉದ್ಯಾನದ ಸದ್ಯದ ಸ್ಥಿತಿ. ಉದ್ಯಾನದಲ್ಲಿ ಮಕ್ಕಳ ಆಟಿಕೆಗಳು, ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಕಟ್ಟೆಗಳಿವೆ.
ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಬಯಲು ರಂಗಮಂದಿರವೂ ಇದೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಉದ್ಯಾನದಲ್ಲಿನ ಬಹುತೇಕ ಆಟಿಕೆಗಳು, ಸಾಮಗ್ರಿಗಳು ಹಾಳಾಗುತ್ತಿವೆ. ಗಿಡಗಳಂತೂ ನೀರಿಲ್ಲದೆ ಒಣಗುತ್ತಿವೆ.
ಅಂದಹಾಗೆ ಕೊರೊನಾ ಲಾಕ್ ಡೌನ್ ಗು ಮುನ್ನಾ ಈ ಉದ್ಯಾನಕ್ಕೆ ಕೆಸರಟಗಿ, ಕೆಸರಟಗಿ ತಾಂಡಾ, ಚಂದುನಾಯಕ ತಾಂಡಾ, ವಾಜಪೇಯಿ ಆಶ್ರಯ ಕಾಲೊನಿ ನಿವಾಸಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹಾಗೂ ಕಲಬುರ್ಗಿ ನಗರದ ಜನರು ಆಗಮಿಸುತ್ತಿದ್ದರಂತೆ. ಕೊರೊನಾ ಬಳಿಕ ಇದರ ನಿರ್ವಹಣೆಯನ್ನ ಅಧಿಕಾರಿಗಳು ಮರೆತಿದ್ದು, ಉದ್ಯಾನದ ಈಗಿನ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
