Kangana Ranaut Birthday – ಅವಕಾಶ ಸಿಗದೆ ವಯಸ್ಕ ಚಿತ್ರಕ್ಕೆ ಸಹಿ ಹಾಕಲು ಮುಂದಾಗಿದ್ದಳು ಈ ನಟಿ.
ಇಂದು ಬಾಲಿವುಡ್ ಕ್ವೀನ್ ಎಂದೇ ಖ್ಯಾತರಾಗಿರುವ ಕಂಗನಾ ರಣಾವತ್ ಹುಟ್ಟುಹಬ್ಬ. ಕಂಗನಾ 23 ಮಾರ್ಚ್ 1987 ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದರು. ಕಂಗನಾ ತನ್ನ ಪ್ರತಿಭೆಯಿಂದಾಗಿ ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಮಾತ್ರವಲ್ಲದೆ ತಮ್ಮ ಒಂದು ಚಿತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿಯ ಜೊತೆ ಜೊತೆಗೆ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನಟನಾ ಲೋಕಕ್ಕೆ ಬರುವ ಮುನ್ನ ಕಂಗನಾ ಮಾಡೆಲಿಂಗ್ ಮಾಡುತ್ತಿದ್ದರು. 17 ನೇ ವಯಸ್ಸಿನಲ್ಲಿ ತನ್ನ ಚಲನಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಿನಿ ರಂಗದಲ್ಲಿ ಕಂಗನಾ ಒಂದಕ್ಕಿಂತ ಒಂದು ಹೆಚ್ಚು ಸವಾಲಿನ ಪಾತ್ರಗಳನ್ನು ನಿರ್ಹವಹಿಸಿದ್ದಾರೆ. ಆದರೆ ಆರಂಭದ ಸಮಯದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್ ಹೊಡೆದಿದ್ದಾರೆ. ಅವಕಾಶಕ್ಕಾಗಿ ವಯಸ್ಕ ಉದ್ಯಮದ ಕದವನ್ನೂ ಒಮ್ಮೆ ತಟ್ಟಿದ್ದರು. ಚಿತ್ರರಂಗದ ಭಾಗವಾಗುವ ಮೊದಲು ವಯಸ್ಕ ಚಿತ್ರಕ್ಕೆ ಹೇಗೆ ಸಹಿ ಹಾಕಿದೇ ಎಂದು ಸ್ವತಃ ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕಂಗನಾ ಹೇಳಿದ್ದು ಹೀಗೆ, ‘ನಾನು ಫೋಟೋಶೂಟ್ ಮಾಡಬೇಕಾಗಿತ್ತು, ಈ ಪಾತ್ರದ ಆಫರ್ ಬಂದಾಗ ನಾನು ನನ್ನ ಟೀನೇಜ್ ನಲ್ಲಿದ್ದೆ. ಇದು ತಪ್ಪು ಎಂದು ನನಗೆ ತಿಳಿದಿತ್ತು ಆದರೆ ನಾನು ಸರಿ ಎಂದು ನಿರ್ಧರಿಸಿದೆ, ನಾನು ಅದನ್ನು ಮಾಡಿದೆ. ಆ ನಂತರ ಆ ಫೋಟೋಶೂಟ್ ನನಗೆ ಅಶ್ಲೀಲ ಚಿತ್ರದಂತೆ ಕಂಡಿತು. ಇದು ನಿಜವಾಗಿಯೂ ವಯಸ್ಕ ಚಿತ್ರವಾಗಿರುವುದರಿಂದ ಇದು ತಪ್ಪು ಎಂದು ಅರಿತುಕೊಂಡೆ. ನಂತರ ಹೇಗೋ ಅಲ್ಲಿಂದ ಹೊರಟುಬಿಟ್ಟೆ
ಅನುರಾಗ್ ಬಸು ಮೊದಲ ಬಾರಿಗೆ ಕಂಗನಾಗೆ ಅವಕಾಶ ನೀಡಿದರು. ಗ್ಯಾಂಗ್‌ಸ್ಟರ್‌ಗಾಗಿ ಕಂಗನಾ ಹಲವು ಆಡಿಷನ್‌ಗಳನ್ನೂ ನೀಡಿದ್ದರು. ತಿಂಗಳುಗಟ್ಟಲೆ ಕಾದರು. ಮತ್ತು ಅಂತಿಮವಾಗಿ ಅವಕಾಶ ಸಿಕ್ಕ ನಂತರ ಕಂಗನಾ ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ಸಿಕ್ಕಿತು, 2005 ರಲ್ಲಿ ನಿರ್ದೇಶಕ ಅನುರಾಗ್ ಬಸು ಅವರು ಕೆಫೆಯಲ್ಲಿ ಕಂಗನಾಗೆ ಕಾಫಿ ಕುಡಿಯುವುದನ್ನು ನೋಡಿ ಗ್ಯಾಂಗ್‌ಸ್ಟರ್ ಚಲನಚಿತ್ರಕ್ಕೆ ಅವಕಾಶ ನೀಡಿದರು. ಗ್ಯಾಂಗ್‌ಸ್ಟರ್ ಚಿತ್ರಕ್ಕಾಗಿ ಕಂಗನಾಗೆ ಅತ್ಯುತ್ತಮ ಚೊಚ್ಚಲ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯಿತು.
ಇಂದು, ತನ್ನ ಪ್ರತಿಭೆಯಿಂದಾಗಿ, ಕಂಗನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಮಾತ್ರವಲ್ಲದೆ ಹೆಚ್ಚು ಜನಪ್ರಿಯರಾಗಿದ್ದಾರೆ. ಕಂಗನಾಗೆ ‘ಗ್ಯಾಂಗ್‌ಸ್ಟರ್’ ನಿಂದ ‘ಮಣಿಕರ್ಣಿಕಾ’ ವರೆಗಿನ ಪ್ರಯಾಣ ತುಂಬಾ ಸವಾಲಿನದ್ದಾಗಿತ್ತು ಆದರೆ ಅವರು ಹೋರಾಟವನ್ನ ಯಾವುದೇ ಹಂತದಲ್ಲೂ ಬಿಡಲಿಲ್ಲ ಮತ್ತು ಅದಕ್ಕಾಗಿಯೇ ಅವರು ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ.