‘ಗುಲಾಮರು’ ನೀಡಿದ್ದ ‘ಇಂಡಿಯಾ’ ಹೆಸರನ್ನು ಬದಲಾಯಿಸಿ ಎಂದ ‘ಕಾಂಟ್ರವರ್ಸಿ ಕ್ವೀನ್’..!
ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಾಟ್ ಲೈಟ್ ನಲ್ಲಿರುವ ಕಂಗನಾ ರಣಾವತ್ ಒಂದೋ ಟ್ರೋಲ್ ಪೇಜ್ ಗಳಲ್ಲಿ ಸದ್ದು ಮಾಡ್ತಿರುತ್ತಾರೆ.. ಎಲ್ಲಾ ಯಾವುದಾದ್ರೂ ಪೋಸ್ಟ್ ಗಳ ಮೂಲಕ ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿರುತ್ತಾರೆ.. ಯಾವುದಾದ್ರೂ ಸಿನಿಮಾ ತಾರೆಯ ಬಗ್ಗೆ , ಕೆಲವೊಮ್ಮೆ ರಾಜಕಾರಣದ ಇನ್ನೂ ಕೆಲವೊಮ್ಮೆ ತಮಗೆ ಸಂಬಂಧವೇ ಇಲ್ಲದ ವಿಚಾರವಾಗಿ ಎದ್ವಾ ತದ್ವಾ ಮಾತಾಡಿ ಸಂಕಷ್ಟಗಳಿಗೂ ಸಿಲುಕಿಕೊಳ್ತಾರೆ.. ಹೀಗೆ ಆಗಿ ಟ್ವಿಟ್ಟರ್ ನಿಂದ ಶಾಸ್ವತವಾಗಿ ಹೊರಬಿದ್ದಿದ್ದಾರೆ..
ಇದೀಗ ‘ಇಂಡಿಯಾ’ದ ಹೆಸರ ಬಗ್ಗೆಯೇ ಚಕಾರ ಎತ್ತಿದ್ದು, ಹೆಸರು ಬದಲಾಯಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಹೌದು.. ಗುಲಾಮರು ನೀಡಿದ ‘ಇಂಡಿಯಾ’ ಹೆಸರನ್ನು ಬದಲಾಯಿಸಿ ಎಂದು ಕಂಗನಾ ರಣಾವತ್ ಒತ್ತಾಯ ಮಾಡಿದ್ದಾರೆ. ಇಂಡಿಯಾ ಹೆಸರನ್ನು ಬದಲಾಯಿಸಿ ಭಾರತ್ ಎಂದು ಮರುನಾಮಕರಣ ಮಾಡುವಂತೆ ಕಂಗನಾ ಸೂಚಿಸಿದ್ದಾರೆ. ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಎಂದು ಬ್ರಿಟೀಷರು ಕೊಟ್ಟ ಹೆಸರು, ಅದು ಗುಲಾಮರ ಹೆಸರು ಎಂದು ಹೇಳಿದ್ದಾರೆ.
ನಾದಬ್ರಹ್ಮ ಹಂಸಲೇಖ ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ
‘ಇಂಡಿಯಾ ತನ್ನ ಪ್ರಾಚೀನ ಅಧ್ಯಾತ್ಮಿಕತೆ ಮತ್ತು ಬುದ್ಧಿವಂತಿಕೆಯಿಂದ ಬೇರೂರಿದ್ದರೆ ಮಾತ್ರ ಅದು ನಮ್ಮ ಉನ್ನತ ನಾಗರಿಕತೆಯ ಆತ್ಮ. ಪ್ರತಿಯೊಬ್ಬರಲ್ಲೂ ವೇದ, ಗೀತಾ ಮತ್ತು ಯೋಗದ ಬಗ್ಗೆ ಆಳವಾಗಿ ಬೇರೂರಿರಬೇಕು ಆಗ ಮಾತ್ರ ವಿಶ್ವ ನಾಯಕರಾಗಿ ಹೊರಹೊಮ್ಮುತ್ತೇವೆ. ದಯವಿಟ್ಟು ಈ ಗುಲಾಮರ ಹೆಸರನ್ನು ಬದಲಾಯಿಸಬಹುದೇ?’ ಎಂದು ಪ್ರಶ್ನೆ ಮಾಡಿದ್ದಾರೆ.
‘ಬ್ರಿಟಿಷರು ನಮಗೆ ಇಂಡಿಯಾ ಎಂದು ಹಸರು ನೀಡಿದರು. ಇದರ ಅರ್ಥ ಸಿಂಧೂ ನದಿಯ ಪೂರ್ವ. ಭಾರತ ಅರ್ಥವನ್ನು ನಾನು ನಿಮಗೆ ಹೇಳುತ್ತೇನೆ. ಇದು ಮೂರು ಸಂಸ್ಕೃತ ಪದಗಳಾದ Bh(Bhav), Ra(Rag), Ta(Tal) ನಿಂದ ಆಗಿದೆ. ನಾವು ಗುಲಾಮರಾಗುವ ಮೊದಲು, ಹೆಚ್ಚು ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕವಾಗಿ ವಿಕಸನಗೊಂಡ ನಾಗರೀಕತೆ. ನಾವು ಕಳೆದುಹೋದ ವೈಭವವನ್ನು ಮರಳಿ ಪಡೆಯ ಬೇಕು, ಭಾರತ ಹೆಸರಿನೊಂದಿಗೆ ಪ್ರಾರಂಭಿಸೋಣ’ ಎಂದಿದ್ದಾರೆ.
10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ…!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.