ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣುತ್ತಿರುವ, ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಲು ತಯಾರಾಗಿರುವ ಕೆ.ಜಿ.ಎಫ್ 2 ಸಿನಿಮಾ ಏಪ್ರೀಲ್ 14 ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ರಾಕಿಂಗ್ ಸ್ಟಾರ್ ಯಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಸುರ್ಬಮಣ್ಯ ಸ್ವಾಮಿ ದರ್ಶನ ಪಡೆದಿದ್ದಾರೆ.
ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದ ಯಶ್ ನಂತರ ಕಾರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದಾರೆ. ಯಶ್ ಜೊತೆಯಲ್ಲಿ ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಸಹ ದೇವರ ದರ್ಶನ ಪಡೆದಿದ್ದು, ವಿಶೇಷ ಪೂಜೆ ಸಲ್ಲಿಸಿದ್ಧಾರೆ. ಧರ್ಮಸ್ಥಳದಲ್ಲಿ ವಿಶೇಷ ಪೂಜೆಯ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಯಶ್ ಭೇಟಿ ಮಾಡಿ ಮಾತುಕತೆ ನಡೆಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ. ಹೆಗ್ಗಡೆಯವರು ಯಶ್ ಗೆ ಶಾಲು ಹೊದಿಸಿ ಗೌರವಿಸಿದ್ದಾರೆ.
ಇನ್ನು ಕುಕ್ಕೆ ಮತ್ತು ಧರ್ಮಸ್ಥಳದಲ್ಲಿ ಭಾನುವಾರವಾಗಿದ್ದ ಕಾರಣ ಜನರು ಹೆಚ್ಚಿದ್ದರು, ಈ ನಡುವೆ ರಾಕಿಂಗ್ ಸ್ಟಾರ್ ನೋಡಿ, ನಟ ಯಶ್ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶ್ ಮತ್ತು ವಿಜಯ್ ಕಿರಗಂದೂರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ ಯಶ್ ಅವರು ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಜೊತೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.









