ಹಾಸ್ಯ  ನಟ ನರಸಿಂಹ ರಾಜು ಅವರ ಹಿರಿಯ ಪುತ್ರಿ ಧರ್ಮವತಿ ನಿಧನ..

1 min read

ಹಾಸ್ಯ  ನಟ ನರಸಿಂಹ ರಾಜು ಅವರ ಹಿರಿಯ ಪುತ್ರಿ ಧರ್ಮವತಿ ನಿಧನ..

 

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ  ನಟ ನರಸಿಂಹ ರಾಜು ಅವರ ಹಿರಿಯ ಪುತ್ರಿ ಧರ್ಮವತಿ ನಿಧನರಾಗಿದ್ದಾರೆ.  ಇಂದು ಮುಂಜಾನೆ 5.30ಕ್ಕೆ  ಹೃದಯಾಘಾತದಿಂದ ಧರ್ಮವತಿ ಕೊನೆಯುಸಿರೆಳೆದಿದ್ದಾರೆ  ಎಂದು  ಕುಟುಂಬಗಳು ಸ್ಪಷ್ಟಪಡಿಸಿವೆ.

 

ಧರ್ಮವತಿ ಪುತ್ರ,  ನಿರ್ದೇಶಕ ಅರವಿಂದ್  ಸಾಮಾಜಿಕ ಜಾಲತಾಣದಲ್ಲಿ ಅಮ್ಮ ಇನ್ನಿಲ್ಲ ಎನ್ನುವ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.   ಧರ್ಮವತಿ ಅವರಿಗೆ 71 ವರ್ಷ ವಯಸ್ಸಾಗಿತ್ತು ಅವರು ಮೂವರು ಮಕ್ಕಳನ್ನ ಅಗಲಿದ್ದಾರೆ. ಧರ್ಮವತಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು, ಆಪ್ತರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

 

ಧರ್ಮವತಿ ಅವರ ಮಕ್ಕಳಾದ ಅವಿನಾಶ್ ಮತ್ತು ಅರವಿಂದ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಧರ್ಮವತಿ ಅವರ ಹಿರಿಯ ಪುತ್ರ ಅರವಿಂದ್ ಅವರು ನಿರ್ದೇಶಿಸಿದ ಲಾಸ್ಟ್ ಬಸ್ ಚಿತ್ರ ಚಿತ್ರರಸಿಕರ ಗಮನ ಸೆಳೆದಿತ್ತು.  ಕಿರಿಯ ಪುತ್ರ ಅವಿನಾಶ್ ನರಸಿಂಹ ರಾಜು ಕೂಡ ನಟನಾಗಿ ಗುರುತಿಸಿಕೊಂಡಿದ್ದು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಸ್ಟ್ ಬಸ್, ಚೇಸ್ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಮ್ಯೂಸಿಕ್ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದಾರೆ.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd