Kannada Rajyotsava Award-ಪ್ರತಿವರ್ಷ ಕನ್ನಡದ ಸಾಧಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿಯನ್ನು ನೀಡಿಗೌರವಿಸಿತ್ತದೆ. ಇನ್ನು ಎರಡು ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಇದ್ದು ಸರ್ಕಾರಿ ವಿಜೇತರ ಪಟ್ಟಿಯನ್ನು ಬಿಡುಗದಡ ಮಾಡಿದೆ.
ಸಂಕೀರ್ಣ, ಸೈನಿಕ, ಪತ್ರಿಕೋದ್ಯಮ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಪೌರಕಾರ್ಮಿಕ, ಆಡಳಿತ, ಹೊರನಾಡು, ಹೊರದೇಶ, ವೈದ್ಯಕೀಯ, ರಂಗಭೂಮಿ, ಸಂಗೀತ, ಜಾನಪದ, ಸಿನಿಮಾ ಸೇರಿದಂತೆ ಈಭಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸುಮಾರು 67 ಜನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು . ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ.
67 ಮಂದಿಗೆ ಸಾಧಕರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದವರಾದ ಸ್ಯಾಂಡಲ್‌ವುಡ್‌ನ ಹಿರಿಯ ನಟ ದತ್ತಣ್ಣ ಹಾಗೂ ಅವಿನಾಶ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಹಿರಿಯ ನಟ ದತ್ತಣ್ಣ ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವಿನಾಶ್ ಅವರು ಸಹ ನಾಲ್ಕು ದಶಕಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಜೊತೆ ಕಿರುತೆರೆ ವಿಭಾಗದಿಂದ ಸಿಹಿ ಕಹಿ ಚಂದ್ರು ಅವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು.ಸಿನಿಮಾ ಕ್ಷೇತ್ರದಿಂದ ದತ್ತಣ್ಣ ಹಾಗೂ ಅವಿನಾಶ್‌ಗೆ ಪ್ರಶಸ್ತಿ ಲಭಿಸಿದ್ದರೆ,
ಸದ್ಯ ಮನರಂಜನಾ ವಾಹಿನಿಯಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿರುವ ಸಿಹಿ ಕಹಿ ಚಂದ್ರು ಅವರು ಕಿರುತೆರೆಯ ‘ಪಾಪ ಪಾಂಡು’, ‘ಸಿಲ್ಲಿ-ಲಲ್ಲಿ’ಯಂತಹ ಹಾಸ್ಯ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ನಟನರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಸಿಹಿಕಹಿ ಚಂದ್ರು ಗುರುತಿಸಿಕೊಂಡಿದ್ದಾರೆ.
ದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗೆದ್ದಿರೋ ಗಣ್ಯರಿಗೆ ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿಯನ್ನು ಗೌರವಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದವರಿಗೆ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.