Kantara- ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಬಿಡುಗಡೆಯಾದ ದಿನಗಳ ಬಳಿಕವೂ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ.
ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯಲ್ಲಿಯೂ ಬಿಡುಗಡೆಯಾದ ಕಾಂತಾರ ಎಲ್ಲಾ ಭಾಷೆಗಳಲ್ಲೂ ತನ್ನ ಚಮತ್ಕಾರಿ ಪ್ರದರ್ಶನವನ್ನು ತೋರುತ್ತಿದೆ. ಇದೀಗ ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ₹ 100 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿದೆ. ಕಾಂತಾರ ಸಿನಿಮಾ ಬೇರೆ ಭಾಷೆಗಳಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಪ್ರದರ್ಶನ ಕಂಡಿದ್ದು , ತೆಲುಗು ಅವತರಣಿಯ ಚಿತ್ರ ಕೇವಲ ಎರಡೇ ದಿನಗಳಲ್ಲಿ ₹12.1 ಕೋಟಿ ಗಳಿಸಿದೆ. ಈ ಚಿತ್ರದ ತೆಲುಗು ಮತ್ತು ಹಿಂದಿ ಆವೃತ್ತಿಗಳು ದೊಡ್ಡ ಸಂಖ್ಯೆಯ ನಿರೀಕ್ಷೆಗಳನ್ನು ದಾಖಲಿಸಿ ಮೀರಿ ಪ್ರದರ್ಶನ ಪಡೆಯುತ್ತಿದೆ .
ಕಾಂತಾರಾ ಹಿಂದಿ ಆವೃತ್ತಿಯು ಎರಡನೇ ದಿನದಲ್ಲಿ ಭಾರಿ ಬಾಕ್ಸ್ ಫಿಸ್ ಬೆಳವಣಿಗೆಯನ್ನು ಕಂಡಿದ್ದ ಎರಡು ದಿನಗಳಲ್ಲಿ ₹4.2 ಕೋಟಿ ಕಬಳಿಸಿದೆ . ತೆಲುಗು ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳಲ್ಲಿ ಸುಮಾರು ₹10 ಕೋಟಿ ಗಳಿಸಿದೆ.
ಇನ್ನೂ, ಕಾಂತಾರ ಸಿನಿಮಾವನ್ನ ಧನುಷ್, ಪ್ರಭಾಸ್, ಶಿಲ್ಪಾ ಶೆಟ್ಟಿ ಅನುಷ್ಕಾ ಶೆಟ್ಟಿ ಬಾಯ್ತುಂಬ ಹೊಗಳಿದ್ದಾರೆ. ತಮ್ಮ ಕುಟುಂಬದೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದ ಶಿಲ್ಪಾ ಇತ್ತೀಚೆಗೆ ಕಾಂತಾರ ಬಗ್ಗೆ Instagram ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.