‘ಕಾಂತಾರ’ (Kantara) ಚಿತ್ರದ ಮೂಲಕ ಮನೆ ಮಾತಾಗಿದ್ದ ಸಪ್ತಮಿ ಗೌಡ (Sapthami Gowda) ಅವರು ಕಿರುತೆರೆ ಪ್ರವೇಶ ಮಾಡಲು ಮುಂದಾಗಿದ್ದಾರೆ.
‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಮಹಾ ಸಂಚಿಕೆ ನಡೆಯುತ್ತಿದ್ದು, ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸಪ್ತಮಿ ಸಾಥ್ ನೀಡಿದ್ದಾರೆ. ಈಗ ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಆಗಮಿಸಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದಾರೆ. ಧಾರಾವಾಹಿಯ ನಾಯಕಿ ತುಳಸಿ ಪಾತ್ರಧಾರಿ ಸುಧಾರಾಣಿ ಅವರು ಮಕ್ಕಳ ಖುಷಿಗಾಗಿ ಎದುರಾಳಿಗಳ ಕುತಂತ್ರಕ್ಕೆ ಮಣಿದು ಮನೆಯಿಂದ ಹೊರಹೋಗುತ್ತಾರೆ. ನಾಯಕಿ ಮತ್ತೆ ಮರಳಿ ಮನೆಗೆ ಬರುತ್ತಾರಾ ಎಂಬುದು ಸದ್ಯದ ಟ್ವಿಸ್ಟ್. ಇದನ್ನು ಸಪ್ತಮಿ ನಿರೂಪಣೆ ಮಾಡುವ ಮೂಲಕ ಸೀರಿಯಲ್ ಕುರಿತು ಕುತೂಹಲ ಕೆರಳಿಸಿದ್ದಾರೆ. ಸಪ್ತಮಿ ಗೌಡ ಅವರು ಈಗ ಬಹುಭಾಷಾ ತೆರೆಯಲ್ಲಿ ಮಿಂಚುತ್ತಿದ್ದಾರೆ.