Kantara Film ಕಾಂತಾರ ಸಿನಿಮಾ ತಂಡದ ವಿರುದ್ಧ ದೂರು
ಕಾಂತಾರ ಸದ್ಯ ಟಾಕ್ ಆಫ್ ದಿ ಟೌನ್.. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ಜನರು ಮಾರು ಹೋಗಿದ್ದಾರೆ.
ಸಿನಿಮಾದಲ್ಲಿ ನಟರ ನಟನೆ , ಮೇಕಿಂಗ್ , ಜೊತೆಗೆ ಸಂಗೀತಕ್ಕೂ ಜನ ಫಿದಾ ಆಗಿದ್ದಾರೆ.,. ಅದ್ರಲ್,ಲೂ ವರಾಹ ರೂಪಂ ಹಾಡಂತೂ ಎಲ್ಲರ ಮನಸ್ಸು ಗೆದ್ದಿದೆ.. ಯಾರು ನೋಡಿದ್ರೂ ವರಾಹ ರೂಪಂ ಗುಂಗಿನಲ್ಲಿದ್ದಾರೆ..
ಆದ್ರೆ ಈ ಹಾಡಿನ ಟ್ಯೂನ್ ಮಲಯಾಳಂನಲ್ಲಿ 5 ವರ್ಷಗಳ ಹಿಂದೆ ಬಂದಿದ್ದ ಆಲ್ಬಂ ಹಾಡು ನವರಸಂನಿಂದ ಕದ್ದದ್ದು ಎಂಬ ಆರೋಪಗಳು ಕೇಳಿಬಂದಿತ್ತು.. ಇದ್ರ ಬೆನ್ನಲ್ಲೇ ಇದಕ್ಕೆ ಉತ್ತರಿಸಿದ್ದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಅವರು ಇದು ಕದ್ದದ್ದಲ್ಲ ಆ ಹಾಡಿನಿಂದ ನ್ಸ್ಪೈರ್ ಆಗಿದ್ದು ಅಷ್ಟೇ ಎಂದಿದ್ದರು..
ಆದ್ರೀಗ ಮಲಯಾಳಂನ ಸಂಗೀತ ತಂಡ ಹಾಡು ಕದ್ದ ಆರೋಪ ಹೊರಿಸಿ ಕಾಂತಾರ ಸಿನಿಮಾ ತಂಡದ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ.

ಥೈಕುಡ್ಡಮ್ ಬ್ರಿಗೇಡ್ ತಂಡ ನಿರ್ಮಿಸಿದ್ದ ನವರಸಂ ಆಲ್ಬಮ್ ಹಾಡಿನ ಟ್ಯೂನ್ ಕದ್ದು ವರಾಹ ರೂಪಂ ಮಾಡಿರೋ ಆರೋಪವಿದ್ದು , ಇದೇ ತಂಡ ದೀಗ ಕಾಂತಾರ ನಿರ್ಮಾಣ ಸಂಸ್ಥೆ ಅಂದ್ರೆ ಹೊಂಬಾಳೆ ಫಿಲಮ್ಸ್ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ..
ಅಂದ್ಹಾಗೆ ಈ ಬಗ್ಗೆ FaceBook ನಲ್ಲಿ ಬರೆದುಕೊಂಡಿರುವ ತೈಕ್ಕುಡಂ ಬ್ರಿಡ್ಜ್ ತಂಡ ನಾವು ಯಾವುದೇ ರೀತಿಯಲ್ಲಿ ಕಾಂತಾರ ಸಿನಿಮಾದೊಂದಿಗೆ ಸಹಯೋಗ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಸಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ ನವರಸಂ ಮತ್ತು ವರಾಹ ರೂಪಂ ಹಾಡಿನ ನಡುವೆ ಹೋಲಿಕೆಗಳಿವೆ. ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ಪ್ರಕಾರ ಪ್ರೇರಣೆ ಮತ್ತು ಚೌಕಟ್ಟಿನ ನಡುವಿನ ಗೆರೆಯು ಸೂಕ್ಷ್ಮವಾಗಿದೆ ಮತ್ತು ನಿರ್ವಿವಾದವಾಗಿದೆ.. ಆದ್ದರಿಂದ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಯೋಜಿಸಿದ್ದೇವೆ.
ನಮ್ಮ ಅನುಮತಿ ಇಲ್ಲದೆ ಚಿತ್ರದ ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಡನ್ನು ಬಳಸಿಕೊಂಡಿದ್ದಾರೆ. ಈ ವಿಷಯದಲ್ಲಿ ನಮ್ಮ ಕೇಳುಗರ ಬೆಂಬಲವನ್ನು ನಾವು ಕೇಳುತ್ತಿದ್ದೇವೆ. ಸಂಗೀತದ ಹಕ್ಕುಗಳನ್ನು ರಕ್ಷಿಸುವ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹೆಚ್ಚಿಸಲು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತಿದ್ದೇವೆ ಎಂದಿದ್ದಾರೆ.