ದೋಸ್ತಾನಾ 2 ಚಿತ್ರದಿಂದ ಕಾರ್ತಿಕ್ ಆರ್ಯನ್ ಅವರನ್ನು ಹೊರ ಹಾಕಿದ ಕರಣ್ ಜೋಹರ್

1 min read
Karan Johar Removes Karthik Aryan

ದೋಸ್ತಾನಾ 2 ಚಿತ್ರದಿಂದ ಕಾರ್ತಿಕ್ ಆರ್ಯನ್ ಅವರನ್ನು ಹೊರ ಹಾಕಿದ ಕರಣ್ ಜೋಹರ್

ಕಾರ್ತಿಕ್ ಆರ್ಯನ್ ಅವರನ್ನು ಧರ್ಮ ಪ್ರೊಡಕ್ಷನ್ಸ್ ದೋಸ್ತಾನಾ 2 ನಿಂದ ಹೊರಹಾಕಿ ದೊಡ್ಡ ಶಾಕ್ ಕೊಟ್ಟಿದೆ.
ನಟ ಕಾರ್ತಿಕ್ ಮತ್ತು ನಿರ್ಮಾಪಕ ಕರಣ್ ಜೋಹರ್ ನಡುವಿನ ​ಭಿನ್ನಾಭಿಪ್ರಾಯಗಳು ದೋಸ್ತಾನಾ 2 ಚಿತ್ರದಿಂದ ಹೊರ ಹಾಕಲು ಕಾರಣವೆಂದು ವರದಿಯಾಗಿದೆ.

ಧರ್ಮ ಪ್ರೊಡಕ್ಷನ್ಸ್ ಅಥವಾ ಕರಣ್ ಜೋಹರ್ ಅವರ ಯಾವುದೇ ಚಲನಚಿತ್ರ ವ್ಯವಹಾರವು ಕಾರ್ತಿಕ್ ಅವರೊಂದಿಗೆ ಮತ್ತೆ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗಿದೆ.
Karan Johar Removes Karthik Aryan

ಈ ಸುದ್ದಿ ಹೊರ ಬರುತ್ತಿದ್ದಂತೆ ನೆಟಿಜನ್ ಗಳು ಬಾಲಿವುಡ್​ ನೆಪೊಟಿಸಮ್ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ ಮತ್ತು ಲವ್ ಆಜ್ ಕಲ್ 2 ನಟನಿಗೆ ತಮ್ಮ ಬೆಂಬಲವನ್ನು ತೋರಿಸಿ ಟ್ವೀಟ್ ಮಾಡಿದ್ದಾರೆ.

ಒಬ್ಬ ಅಭಿಮಾನಿ, “ಕರಣ್ ಜೋಹರ್ ಯಾವಾಗಲೂ ಹೊರಗಿನವರಿಗೆ ಮಾಡಿದ್ದು ಇದನ್ನೇ ಮತ್ತು ಅವರು ಕಾರ್ತಿಕ್ ಆರ್ಯನ್‌ಗೆ ಮಾಡಿದ್ದಾರೆ. ಆದರೆ ಕಾರ್ತಿಕ್ ಅವರಿಗೆ ಕರಣ್ ಜೋಹರ್ ನ ಅಗತ್ಯವಿಲ್ಲ. ಅವರು ಈಗಾಗಲೇ ಬ್ರಾಂಡ್ ಆಗಿದ್ದಾರೆ ” ಎಂದು ಪ್ರತಿಕ್ರಿಯಿಸಿದ್ದರೆ,
ಪರಿಸ್ಥಿತಿ ಹೇಗಿರಲಿ, ನಾನು ಅವನನ್ನು ಕಂಗೆಡಿಸಲು ಬಂದಿದ್ದೇನೆ ಮತ್ತು ಕಂಗೆಡಿಸುತ್ತೇನೆ ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

ದೋಸ್ತಾನಾ 2 ರ ನಿರ್ಮಾಣವು ಈಗಾಗಲೇ ನಡೆಯುತ್ತಿದೆ, ಮತ್ತು ಕಾರ್ತಿಕ್ ಅವರ 20 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.
ದೋಸ್ತಾನಾ 2′ ಚಿತ್ರದಿಂದ ಕಾರ್ತಿಕ್ ನನ್ನು ಹೊರಹಾಕಿರುವ ಜೊತೆಗೆ ಧರ್ಮ ಪ್ರೋಡಕ್ಷನ್ ಹೌಸ್‌ ನ ಎಲ್ಲಾ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ.

Karan Johar Removes Karthik Aryan

ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ಸಂದರ್ಭದಲ್ಲಿ ಕರಣ್ ಜೋಹರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಸುಶಾಂತ್​ರನ್ನು ಕರಣ್ ಜೋಹರ್ ತಮ್ಮ ಬ್ಯಾನರ್​ನಿಂದ ಬ್ಯಾನ್ ಮಾಡಿದ್ದು, ಇದರಿಂದ ಅವಕಾಶಗಳು ಸಿಗದೆ ಸುಶಾಂತ್ ಆತ್ಮಹತ್ಯೆಗೆ ಶರಣಾದರು ಎಂದು ಕೇಳಿ ಬಂದಿತ್ತು.

#KaranJohar #KarthikAryan #Dostana2

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd