Kariya Movie | ಕರಿಯ ಸಿನಿಮಾದ ನಿರ್ಮಾಪಕ ಇನ್ನಿಲ್ಲ
1 min read
kariya movie producer anekal balaraj dies in bengaluru saaksha tv
Kariya Movie | ಕರಿಯ ಸಿನಿಮಾದ ನಿರ್ಮಾಪಕ ಇನ್ನಿಲ್ಲ
ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ
ಬೆಂಗಳೂರಿನಲ್ಲಿ ಅಪಘಾತದಿಂದ ವಿಧಿವಶ
ವಾಕಿಂಗ್ ಮಾಡುವಾಗ ಸಂಭವಿಸಿದ ಅಪಘಾತ
ಸ್ಯಾಂಡಲ್ ವುಡ್ ಗಣ್ಯರಿಂದ ಸಂತಾಪ
ಕರಿಯ ಸಿನಿಮಾದ ನಿರ್ಮಾಪಕ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಜೆ ಪಿ ನಗರದಲ್ಲಿ ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಕರಿಯ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡಿದ್ದರು. ಅವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಅನೇಕರು ಸಂತಾಪ ಸೂಚಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಆನೇಕಲ್ ಬಾಲರಾಜ್ ಅವರು ಎಂದಿನಂತೆ ಇಂದು ವಾಕಿಂಗ್ ಮಾಡಲು ತೆರಳಿದ್ದಾರೆ. ಈ ವೇಳೆ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದ್ದು, ಫುಟ್ ಪಾತ್ ಮೇಲೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಯಶಸ್ಸಿ ನಿರ್ಮಾಪಕರು ಎಂದು ಗುರುತಿಸಿಕೊಂಡಿದ್ದ ಬಾಲರಾಜ್ ಅವರು, ಪ್ರೇಮ್ ನಿರ್ದೇಶನದ ಕರಿಯಾ, ಶ್ರೀನಿವಾಸ್ ಪ್ರಭು ನಿರ್ದೇಶನ ಮಾಡಿದ್ದ ಕರಿಯಾ 2, ಗಣಪ, ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
kariya movie producer anekal balaraj dies in bengaluru