ಚುನಾವಣೆ ಪ್ರಚಾರಕ್ಕೆ (Election Campaign) ಆಗಮಿಸಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ (MLA MP Renukacharya) ಅವರಿಗೆ ಗ್ರಾಮಸ್ಥರು ಚಳಿ ಬಿಡಿಸಿ, ಊರ ಒಳಗೆ ಬಿಡದ ಘಟನೆ ನಡೆದಿದೆ.
ನ್ಯಾಮತಿ ತಾಲೂಕಿನ ಕಂಕನಹಳ್ಳಿ ತಾಂಡಾದಲ್ಲಿ (Kankanagalli Tanda) ನಡೆದಿದೆ. ಚುನಾವಣೆ (Assembly Election) ಹಿನ್ನೆಲೆ ಶಾಸಕ ರೇಣುಕಾಚಾರ್ಯ ತಮ್ಮ ಬೆಂಬಲಿಗರ ಜೊತೆಯಲ್ಲಿ ಕಂಕನಹಳ್ಳಿ ತಾಂಡಾಕ್ಕೆ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಒಳಗೆ ಬಿಡದೆ, ಮರಳಿ ಕಳುಹಿಸಿದ್ದಾರೆ.
ಈ ಗ್ರಾಮದಲ್ಲಿ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಎಸ್ಸಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿದ್ದೀರಿ. ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ ಎಂದು ಯುವಕನೊಬ್ಬ ತೀವ್ರ ಆಕ್ರೋಶ ಹೊರ ಹಾಕಿದ್ದಾನೆ.
ಕೆಲಸವನ್ನೆ ಮಾಡದೇ ಬರೀ ಫೋಟೊ, ವಿಡಿಯೋ ಪೋಸ್ ಕೊಡುತ್ತೀರಿ. ನೀವು ನಮ್ಮ ಊರಿಗೆ ಬರಬೇಡಿ ಎಂದು ರೇಣುಕಾಚಾರ್ಯ ಅವರ ಮುಂದೆಯೇ ಆಕ್ರೋಶ ಹೊರ ಹಾಕಿದ್ದಾರೆ. ಆ ನಂತರ ಪ್ರಚಾರ ಮಾಡದೆ ರೇಣುಕಾಚಾರ್ಯ ಅವರು ಮರಳಿ ಹೋಗಿದ್ದಾರೆ.