BJP | ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ ಐಟಿ ಸೆಲ್ : ಕೈ ಕಿಡಿ
ಬೆಂಗಳೂರು : ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಮತ್ತು ರಾಜ್ಯ ಬಿಜೆಪಿಯ ಕಿಚ್ಚಾಟ ಮುಂದುವರೆದಿದೆ. ಇತ್ತಿಚೆಗೆ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರ ಫೋಟೋವನ್ನು ಹಂಚಿಕೊಂಡರು ಸ್ಕ್ರ್ಯೂ ಡ್ರೈವರ್ ಮಾಜಿ ಗೃಹ ಸಚಿವ ಸ್ವಗೃಹದಲ್ಲಿ ಬೈಬಲ್ ವಶ ಎಂದು ಹಿಂದೂ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿತ್ತು.
ಇದಕ್ಕೆ ಇಂದು ಕಾಂಗ್ರೆಸ್ ತಿರುಗೇಟು ನೀಡಿದ್ದು, ಸಂವಿಧಾನವನ್ನು ಬೈಬಲ್ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ ಐಟಿ ಸೆಲ್! ಸದಾ ಕೋಮುಗಲಭೆ,ಬೆಂಕಿ ಹಚ್ಚುವುದು ಸುಳ್ಳನ್ನ ಕೊರಳಿಗೆ ಹಾಕಿಕೊಂಡು ತಿರಗಾಡುತ್ತಿರುವ ನಾಡದ್ರೋಹಿ ಬಿಜೆಪಿಯ ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ ಎಂದು ಕುಟುಕಿದೆ.
https://twitter.com/INCKarnataka/status/1513408782696476673?s=20&t=wwYFjqxL5SM_Zvz-06y1Ig
ಇದೇ ವೇಳೆ ಚಂದ್ರು ಕೊಲೆ ಪ್ರಕರಣದಲ್ಲಿ ಸಿದ್ದರಾಮಯ್ಯ ಟೀಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ನಾನು ಸಮರ್ಥ ಮಂತ್ರಿ, ಸಿದ್ದರಾಮಯ್ಯ ಸರ್ಟಿಫಿಕೆಟ್ ಬೇಕಾಗಿಲ್ಲ ಎಂಬ ಹೇಳಿಕೆಗೂ ಕಾಂಗ್ರೆಸ್ ತಿರುಗೇಟು ನೀಡಿದೆ.
ಕಾಂಗ್ರೆಸ್ ಟ್ವಿಟ್ ನಲ್ಲಿ… ಅಯ್ಯೋ ಬಿಡಿ.. ನೀವೆಷ್ಟು ಸಮರ್ಥರು ಅನ್ನೋದು ಗೊತ್ತಿರೋದೇ. ರಾಜ್ಯದಲ್ಲಿ ಧರ್ಮಯುದ್ಧ ನಡೀತಾ ಇದ್ರೂ, ಬಾಯಿಗೆ ಕಡುಬು ತುರುಕಿಕೊಂಡು ಕುಳಿತಿದ್ದೀರಿ. ನೀವು ಗೃಹಮಂತ್ರಿ ಆಗಿರೋದು ಬಿಜೆಪಿ ಮೆಚ್ಚಿಸೋಕೂ ಅಲ್ಲ, ಸಿಎಂ ಮೆಚ್ಚಿಸೋಕೂ ಅಲ್ಲ. ಮೊದಲು ಬಕೆಟ್ ಹಿಡಿಯೋದು ಬಿಡಿ. ಜನಮೆಚ್ಚೋ ಕೆಲಸ ಮಾಡಿ ಎಂದು ಕುಟುಕಿದೆ. Karnataka bjp congress tweet war









