Karnataka | ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ.. ಬಿಜೆಪಿ ಪ್ರಶ್ನೆ
ಬೆಂಗಳೂರು : ಒಂದು ವಾರದಲ್ಲಿ ಎರಡು ಬಾರಿ ದೆಹಲಿ ದಂಡಯಾತ್ರೆ, ಚಿಂತನ ಶಿಬಿರದಲ್ಲಿ ಒಗ್ಗಟ್ಟಿನ ಮಂತ್ರ ಜಪ. ಇಷ್ಟೆಲ್ಲಾ ಆದರೂ ಡಿ.ಕೆ.ಶಿವಕುಮಾರ್ ಅವರಿಗೆ ಹಿರಿಯ ನಾಯಕ ಎಸ್‌ಆರ್‌ಪಿ ಅವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಹಠವೇ ಅಂತಿಮವಾಯಿತು. ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಬಿಜೆಪಿ ಘಟಕ, ತಿಹಾರ್ ಜೈಲಿನಿಂದ ದೊಡ್ಡ ಮೆರವಣಿಗೆ ಮಾಡಿಕೊಂಡು ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು ಎರಡು ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿಯನ್ನು ಭರ್ತಿ ಮಾಡಲು ಡಿ.ಕೆ.ಶಿವಕುಮಾರ್ ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಉಪಾಧ್ಯಕ್ಷರ ಸ್ಥಾನದ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೂಚಿಸಿದ ಹೆಸರುಗಳಿವೆ. ಅಷ್ಟೊಂದು #ಅಸಹಾಯಕಡಿಕೆಶಿ ಆಗಿದ್ದೇಕೆ ಎಂದು ಬಿಜೆಪಿ ಕುಟುಕಿದೆ.
https://twitter.com/BJP4Karnataka/status/1529054934426996738?s=20&t=YxNKD2StczdnRybVQaCUIQ
ನಾನೇ ಮುಂದಿನ ಸಿಎಂ – ಸಿದ್ದರಾಮಯ್ಯ. ಪಕ್ಷ ಕಟ್ಟಿರುವುದು ನಾನು – ಡಿ.ಕೆ.ಶಿವಕುಮಾರ್. ಎದುರಾಳಿ ಬಲಗೊಳ್ಳುತ್ತಿದ್ದಾನೆ ಅಂದರೆ #ಅಸಹಾಯಕಡಿಕೆಶಿ ಆಗಿದ್ದಾರೆಂದರ್ಥವೇ?
ಅಡುಗೆ ನಾನು ರೆಡಿ ಮಾಡಿದ್ದು, ಬೇರೆಯವರು ಬರೇ ತಿನ್ನುವುದಕ್ಕಾ? ಡಿ.ಕೆ.ಶಿವಕುಮಾರ್. ಡಿಕೆಶಿ ಅವರೇ, ನೀವು ಬರೇ ಇಂತಹ ಮಾತಿನ ಬಾಣ ಎಸೆಯಬೇಕಷ್ಟೇ. ಸಿದ್ದರಾಮಯ್ಯ ನೀವು ಶ್ರಮ ವಹಿಸಿ ಮಾಡಿದ ಅಡುಗೆ ತಿಂದು ಮುಗಿಸುವುದು ಶತಸಿದ್ಧ. Karnataka bjp d k shivakumar siddaramaiah
ತಮ್ಮ ಪರಮಾಪ್ತ ಎಂಬಿ ಪಾಟೀಲರನ್ನು, ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ.ಅದೇ ಎಂಬಿ ಪಾಟೀಲರು ಕೆಪಿಸಿಸಿ ಅಧ್ಯಕ್ಷರನ್ನೇ ಸಾರ್ವಜನಿಕ ವಲಯದಲ್ಲಿ, ಮಾಧ್ಯಮದವರ ಮುಂದೆ ಪ್ರಶ್ನಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕವೇ! ಎಂದು ಬಿಜೆಪಿ ವ್ಯಂಗ್ಯವಾಡಿದೆ.
https://twitter.com/BJP4Karnataka/status/1529054343256674304?s=20&t=YxNKD2StczdnRybVQaCUIQ