Karnataka BJP | ನಿಮ್ಮ ಸಂಸ್ಕಾರ ಹೀನ ಈ ನಡೆಗೆ ಧಿಕ್ಕಾರ | ಡಿಕೆಶಿ ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಠ್ಯ- ಪುಸ್ತಕ ಹರಿದು ಹಾಕಿದ್ದು, ಇದನ್ನ ರಾಜ್ಯ ಬಿಜೆಪಿ ಘಟನ ತೀವ್ರವಾಗಿ ಖಂಡಿಸಿದೆ. ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಈ ವರ್ತನೆ ಎಂದೆಂದಿಗೂ ವಿದ್ಯಾರ್ಥಿಗಳಿಗೆ ಮಾದರಿಯಾಗದು. ಸದನದಲ್ಲಿ ವಿಧೇಯಕ ಹರಿಯುವುದು, ಸಭೆಯಲ್ಲಿ ಪುಸ್ತಕ ಹರಿಯುವುದು ನಿಮಗೆ ಚಾಳಿಯಾಗಿಬಿಟ್ಟಿದೆ. ನಿಮ್ಮ ಸಂಸ್ಕಾರ ಹೀನ ಈ ನಡೆಗೆ ಧಿಕ್ಕಾರವಿರಲಿ ಎಂದು ಆಕ್ರೋಶ ಹೊರಹಾಕಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಬಿಜೆಪಿ, ಮಾನ್ಯ ಡಿಕೆಶಿ ಅವರೇ, ನಿಮ್ಮ ಈ ಕೃತ್ಯವನ್ನು ನಾಡು ಎಂದಿಗೂ ಮರೆಯದು. ನೀವು ಹರಿದು ಹಾಕಿದ್ದು ಕೇವಲ ಪುಸ್ತಕವನ್ನಲ್ಲ, √ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನಗಾಥೆಯನ್ನು √ ಕೆಂಪೇಗೌಡರ ಇತಿಹಾಸವನ್ನು √ ಕುವೆಂಪು ಅವರ ಸಾಧನೆಯನ್ನು √ ಬಸವಣ್ಣ ಅವರ ಸಂದೇಶವನ್ನು
ಡಿಕೆಶಿ ಅವರೇ, ಸಿನಿಮೀಯ ಶೈಲಿಯಲ್ಲಿ ಪಠ್ಯ- ಪುಸ್ತಕ ಹರಿದು ಹಾಕುವುದರಿಂದ ವಿದ್ಯಾರ್ಥಿ ಸಮೂಹದ ಮೇಲೆ ಪ್ರಭಾವ ಬೀರಬಹುದೆಂಬುದು ಭ್ರಮೆಯಿಂದ ಹೊರಗೆ ಬನ್ನಿ. ವಿದ್ಯಾರ್ಥಿ ನಾಯಕರಾಗಿದ್ದಾಗಲೇ ನೀವು ರೌಡಿಸಂ ಮಾಡಿದ್ದಿರಿ. ಈಗ ಹಳೆ ಅಭ್ಯಾಸ ಮುಂದುವರಿಸುತ್ತಿದ್ದೀರಾ?

ಸಂವಿಧಾನ ವಿರೋಧಿ ಕೃತ್ಯ ನಡೆಸುವುದು ಕಾಂಗ್ರೆಸ್ ನಾಯಕರಿಗೆ ರಕ್ತಗತವಾಗಿ ಬಂದ ಕಾಯಿಲೆ. ಎರಡನೇ ಯುಪಿಎ ಅವಧಿಯಲ್ಲಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ ರಾಹುಲ್ ಗಾಂಧಿಗೂ, ಪಠ್ಯ ಪುಸ್ತಕ ಹರಿದು ಹಾಕಿದ ಡಿಕೆಶಿಗೂ ಯಾವುದೇ ವ್ಯತ್ಯಾಸವಿಲ್ಲ.
ಡಿ.ಕೆ.ಶಿವಕುಮಾರ್ ಅವರೇ, ನೀವು ಪಠ್ಯ-ಪುಸ್ತಕವನ್ನು ಹರಿದು ಹಾಕಬಹುದು, ಸ್ವಾಮೀಜಿಗಳನ್ನು ತಪ್ಪು ದಾರಿಗೆ ಎಳೆಯಬಹುದು.ಆದರೆ ಇದರಿಂದ ಸಾಧಿಸುವುದಾದರೂ ಏನು? ಹೆಚ್ಚೆಂದರೆ ಮೊಹಮ್ಮದ್ ನಲಪಾಡ್ ಅವರಂಥಹ ಒಂದಷ್ಟು ರೌಡಿಗಳನ್ನು ಸೃಷ್ಟಿಸಬಹುದು, ಅಷ್ಟೇ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಾರೆ.√ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸೀತೆಗೆ ಅವಮಾನಿಸುತ್ತಾರೆ.√ ಕೆಪಿಸಿಸಿ ಅಧ್ಯಕ್ಷರು ಸರಸ್ವತಿಗೆ ಅವಮಾನಿಸುತ್ತಾರೆ. ಕಾಂಗ್ರೆಸ್ಸಿಗರೇ #ಹಿಂದೂವಿರೋಧಿ ನೀತಿ ಏಕೆ ಎಂದು ಪ್ರಶ್ನಿಸಿದೆ.








