ಮೋದಿ ಅಕ್ಕಿಯನ್ನ ಪುಕ್ಕಟೆಯಾಗಿ ಕೊಟ್ಟು… ಸಿದ್ದು ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು : ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರ ಎಂದು ಬಸ್ಸು, ಗೋಡೆಗಳ ಮೇಲೆ ಜಾಹೀರಾತು ಬರೆಸಿಕೊಂಡರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ. Karnataka bjp Siddaramaiah Narendra modi saaksha tv
ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ, “ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳ್ತಾರೆ. ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಅವರು ಹೇಳಬೇಕಿತ್ತು. ಹೇಳಿಲ್ಲ. ಕೋವಿಡ್ ಬಗ್ಗೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ. ಎರಡನೇ ಅಲೆಯಲ್ಲಿ ಏನು ಕೊಟ್ರು ಎಂದು ಪ್ರಶ್ನಿಸಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿರುವ ಸಿದ್ದರಾಮಯ್ಯ, ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಎಂದು ಜಾಹೀರಾತು ನೀಡಿದಿರಿ. ಆ ಬಣ್ಣ ಬಣ್ಣದ ಜಾಹೀರಾತಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದಿರಿ? ಕೊನೆಗೂ ನಿಮ್ಮಕಾಲದಲ್ಲಿ ಬಯಲು ಬಹಿರ್ದೆಸೆ ನಿಲ್ಲಿಸಲು ಸಾಧ್ಯವಾಯಿತೇ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಸಿವು ಮುಕ್ತ ಕರ್ನಾಟಕ ಎಂದು ಘೋಷಣೆ ಮಾಡಿದ್ದರು. ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರ ಎಂದು ಬಸ್ಸು, ಗೋಡೆಗಳ ಮೇಲೆ ಜಾಹೀರಾತು ಬರೆಸಿಕೊಂಡರು. ಸಿದ್ದರಾಮಯ್ಯನವರೇ, ಅದಕ್ಕೆಲ್ಲ ಮಾಡಿದ ಖರ್ಚೆಷ್ಟು? ಜಾಹಿರಾತು ಸರ್ಕಾರದ ಒಂದು ಉಪಕ್ರಮ ಎಂಬುದು ತಿಳಿದಿಲ್ಲವೇ ಎಂದು ಕುಟುಕಿದೆ.