ಡಿಕೆಶಿ ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ?
ಬೆಂಗಳೂರು : ನೇಮಕಾತಿ ಅಕ್ರಮದ ಕುರಿತಂತೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಸಮರ ಮುಂದುವರೆಸಿದೆ. ತಾಕತ್ತಿದ್ದರೇ ನಮಗೆ ನೋಟಿಸ್ ನೀಡಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ಟಾಂಗ್ ನೀಡಿದ್ದು, ತಾಕತ್ತಿದ್ದರೆ ನಮಗೆ ನೋಟಿಸ್ ನೀಡಿ ಎಂದು ಸವಾಲೆಸೆದಿರುವ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ವಿರುದ್ದವಿರುವ ಪ್ರಕರಣಗಳು ಎಷ್ಟು ಗೊತ್ತೇ ಎಂದು ಪ್ರಶ್ನಿಸಿದೆ.
ಅಲ್ಲದೇ ಎಷ್ಟು ಪ್ರಕರಣದಲ್ಲಿ ಬೇಲ್ ಪಡೆದಿದ್ದೀರಿ, ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೀರಿ ಎಂದು ವಿವರಿಸುವಿರಾ? ನೀವು ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಎಂದು ಬಿಜೆಪಿ ಕುಟುಕಿದೆ.
ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ಕುರಿತು ಟ್ವೀಟ್ ಮಾಡಿ, ಸರ್ಕಾರಿ ಅಧಿಕಾರಿ ಸಮನ್ಸ್ ಕಳುಹಿಸಿದರೆ, ಜವಾಬ್ದಾರಿಯುತ ನಾಗರಿಕನಾಗಿ, ಜನಪ್ರತಿನಿಧಿಯಾಗಿ ಅಲ್ಲಿಗೆ ಬಂದು ಪ್ರಿಯಾಂಕ್ ಖರ್ಗೆ ಉತ್ತರಿಸಬೇಕಿತ್ತು. ಪ್ರಕರಣದ ಬಗ್ಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಳ್ಳಿ ಎಂದಷ್ಟೇ ಹೇಳಿದ್ದು, ನೀವೇಕೆ ʼನನ್ನನ್ನೇ ಆರೋಪಿಯಂತೆ ಬಿಂಬಿಸುತ್ತಿದ್ದಾರೆʼ ಎಂದು ಗೋಳಾಡುತ್ತಿದ್ದೀರಿ?
ನೇಮಕಾತಿ ಅಕ್ರಮದ ಕುರಿತಂತೆ ಆರಂಭದಿಂದಲೂ ತನಿಖಾಧಿಕಾರಿಯಂತೆ ವರ್ತಿಸಿದ @PriyankKharge ಅವರು ಈಗ ವಿಚಾರಣೆಗೆ ಕರೆದಾಗ ಸೊಬಗನಂತೆ ವರ್ತಿಸುತ್ತಿದ್ದಾರೆ.
ಇದೆಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವ ಖರ್ಗೆ ಮನೆತನದ ಅತ್ಯಾಪ್ತರನ್ನು ರಕ್ಷಿಸಲು ಮಾಡುತ್ತಿರುವ ನವರಂಗಿ ಆಟವಲ್ಲದೆ ಮತ್ತೇನು?#CONgressPSIToolkit
— BJP Karnataka (@BJP4Karnataka) April 26, 2022
ಮಾಧ್ಯಮದ ಮುಂದೆ ಹೇಳಿಕೆ ನೀಡಿ ಹಿಟ್ & ರನ್ ಮಾಡಬಹುದು ಎಂದು ಪ್ರಿಯಾಂಕ್ ಖರ್ಗೆ ಅಂದುಕೊಂಡಿದ್ದರು. ಆದರೆ ಪ್ರಕರಣ ತನ್ನ ಬುಡಕ್ಕೆ ಬರುತ್ತಿದ್ದಂತೆ ಪಲಾಯನ ಮಾಡುತ್ತಿದ್ದಾರೆ.ಸರ್ಕಾರ ಆಳವಾದ ತನಿಖೆ ಮಾಡದು ಎಂದುಕೊಂಡಿದ್ದವರು ಈಗ ಬೆದರಿದ್ದಾರೆ. ಏಕೆಂದರೆ ಖರ್ಗೆ ಕುಟುಂಬದ ಆತ್ಯಾಪ್ತರೇ ಇಲ್ಲಿ ಆರೋಪಿಗಳಾಗಿದ್ದಾರೆ.
ನೇಮಕಾತಿ ಅಕ್ರಮದ ಕುರಿತಂತೆ ಆರಂಭದಿಂದಲೂ ತನಿಖಾಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ಅವರು ಈಗ ವಿಚಾರಣೆಗೆ ಕರೆದಾಗ ಸೊಬಗನಂತೆ ವರ್ತಿಸುತ್ತಿದ್ದಾರೆ. ಇದೆಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವ ಖರ್ಗೆ ಮನೆತನದ ಅತ್ಯಾಪ್ತರನ್ನು ರಕ್ಷಿಸಲು ಮಾಡುತ್ತಿರುವ ನವರಂಗಿ ಆಟವಲ್ಲದೆ ಮತ್ತೇನು ಎಂದು ಖಾರವಾಗಿ ಟೀಕೆ ಮಾಡಿದೆ ಬಿಜೆಪಿ. Karnataka bjp slams dk shivakumar and priyank kharge