BJP | ಡಬ್ಬಾ ಸರ್ಕಾರ ಸಿದ್ದರಾಮಯ್ಯರನ್ನ ಸಾಲರಾಮಯ್ಯ ಎಂದ ಬಿಜೆಪಿ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ವಿಚಾರವಾಗಿ ಕಲಾಪದಲ್ಲಿ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ. ಡಬ್ಬಾ ಸರ್ಕಾರ ಎಂದು ಗುಡುಗಿದ್ದರು. ಇದಕ್ಕೆ ಇದೀಗ ರಾಜ್ಯ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸಾಲರಾಮಯ್ಯ ಅಂತಾ ಟೀಕೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕೋವಿಡ್ ಸಂಕಷ್ಟದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿಯ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ. ಆದರೂ ಈ ಬಾರಿಯ ಆಯವ್ಯಯವನ್ನು ಸಾಲದ ಬಜೆಟ್ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಸಿದ್ದರಾಮಯ್ಯನವರೇ, ನೀವು ಮಾಡಿದ ಸಾಲ ಮರೆತು ಹೋಯಿತೇ? ನಾವು ನೆನಪಿಸುತ್ತಿದ್ದೇವೆ!
ಕೋವಿಡ್ ಸಂಕಷ್ಟದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿಯ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ.
ಆದರೂ ಈ ಬಾರಿಯ ಆಯವ್ಯಯವನ್ನು ಸಾಲದ ಬಜೆಟ್ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
ಸಿದ್ದರಾಮಯ್ಯನವರೇ, ನೀವು ಮಾಡಿದ ಸಾಲ ಮರೆತು ಹೋಯಿತೇ?
ನಾವು ನೆನಪಿಸುತ್ತಿದ್ದೇವೆ!#ಸಾಲರಾಮಯ್ಯ pic.twitter.com/IhukklClsy
— BJP Karnataka (@BJP4Karnataka) March 8, 2022
ಮಾನ್ಯ ಸಿದ್ದರಾಮಯ್ಯನವರೇ, ನೀವು ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಮಾಡದಷ್ಟು ಸಾಲ ಮಾಡಿದ್ದ ನೀವು ಈಗ ಯಾವ ನೈತಿಕತೆ ಇಟ್ಟುಕೊಂಡು ಆಯವ್ಯಯವನ್ನು ಟೀಕಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
karnataka bjp slams siddaramaiah








