BJP | ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಸಿದ್ದರಾಮಯ್ಯ
ಬೆಂಗಳೂರು : ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ ಎಂದು ರಾಜ್ಯ ಬಿಜೆಪಿ ಟೀಕೆ ಮಾಡಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ, ರೈಲ್ವೆ ಅಪಘಾತ ಆಗಿದ್ದಕ್ಕೆ ಶಾಸ್ತ್ರಿ ರಾಜೀನಾಮೆ ನೀಡಿದ್ರು, ಈಗಿನವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂಬ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ತಿರುಗೇಟು ನೀಡಿದೆ.
ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ, ಲಕ್ಷಾಂತರ ಮೌಲ್ಯದ ವಾಚ್ ಹಗರಣ ಆದಾಗ ನಿಮ್ಮ ಮಾನ ಮಾರ್ಯಾದೆ ಎಲ್ಲಿತ್ತು? ಅರ್ಕಾವತಿ ರೀಡೂ ಪ್ರಕರಣದಲ್ಲಿ ನಿಮ್ಮ ಮಾನ ಮರ್ಯಾದಿ ಎತ್ತರಕ್ಕೇರಿತ್ತೇ? ಜೈಲಿನಿಂದ ಬಂದವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವಾಗ ನಿಮ್ಮ ಮಾನ ಮರ್ಯಾದೆ ಎಲ್ಲಿತ್ತು ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಮಾನ್ಯ @siddaramaiah ಅವರೇ,
√ ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜಿನಾಮೆ ಕೇಳುವ ತಾಕತ್ತಿದೆಯೇ?
√ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್ ನಾಯಕರ ಮಾನ ಮರ್ಯಾದೆಯನ್ನು ಎಂದು ಪ್ರಶ್ನಿಸುತ್ತೀರಿ?#ಬುರುಡೆರಾಮಯ್ಯ
— BJP Karnataka (@BJP4Karnataka) May 8, 2022
ಮಾನ್ಯ ಸಿದ್ದರಾಮಯ್ಯ ಅವರೇ, ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜಿನಾಮೆ ಕೇಳುವ ತಾಕತ್ತಿದೆಯೇ? ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್ ನಾಯಕರ ಮಾನ ಮರ್ಯಾದೆಯನ್ನು ಎಂದು ಪ್ರಶ್ನಿಸುತ್ತೀರಿ ಎಂದು ಕಿಡಿಕಾರಿದೆ.
ಸಿದ್ದರಾಮಯ್ಯ ಅವರೇ, ನಿಮ್ಮ ಬಾಯಿಯಿಂದ ಇಂತಹ ಮಾತುಗಳು ಹೊರಬಂದರೆ ರಾಜ್ಯದ ಜನತೆ ನವರಂಧ್ರಗಳಿಂದ ನಗುತ್ತಾರೆ. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಹೈಕಮಾಂಡ್ಗೆ ನೀಡಿದ ಕಪ್ಪವನ್ನು ಡೈರಿಯಲ್ಲಿ ಬರೆದಿಟ್ಟ ನೀವು ಈಗ ಸತ್ಯ ಹರಿಶ್ಚಂದ್ರನಂತೆ ವರ್ತಿಸಿದರೆ ನಂಬಲು ಸಾಧ್ಯವೇ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
Karnataka bjp slams siddaramaiah statement in bangalore