Siddaramaiaha | ಸಿದ್ದರಾಮಯ್ಯರನ್ನ ವಲಸೆ ನಾಯಕ ಎಂದ ಬಿಜೆಪಿ ಟೀಕೆ
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಸಮರ ಮುಂದುವರೆಸಿದೆ.
ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದರ್ಶನ ಮಾಡುವ ಆಸೆಯಿದ್ದರೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಹಲವು ಪ್ಯಾಕೇಜ್ ಪ್ರವಾಸದ ವ್ಯವಸ್ಥೆ ಮಾಡುತ್ತೇವೆ.
ಅದನ್ನು ಬಿಟ್ಟು ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬೆಂಗಳೂರು ಎಂದು ವಲಸೆ ಹೋಗಬಹುದಾದ ಕ್ಷೇತ್ರಗಳ ಪಟ್ಟಿ ಮಾಡಿದರೆ ಡಿ.ಕೆ.ಶಿವಕುಮಾರ್ ಸುಮ್ಮನಿರುವರೇ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಕುಟುಕಿದೆ.
ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದರ್ಶನ ಮಾಡುವ ಆಸೆಯಿದ್ದರೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಹಲವು ಪ್ಯಾಕೇಜ್ ಪ್ರವಾಸದ ವ್ಯವಸ್ಥೆ ಮಾಡುತ್ತೇವೆ.
ಅದನ್ನು ಬಿಟ್ಟು ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬೆಂಗಳೂರು ಎಂದು ವಲಸೆ ಹೋಗಬಹುದಾದ ಕ್ಷೇತ್ರಗಳ ಪಟ್ಟಿ ಮಾಡಿದರೆ @DKShivakumar ಸುಮ್ಮನಿರುವರೇ?#ವಲಸೆರಾಮಯ್ಯ
— BJP Karnataka (@BJP4Karnataka) April 23, 2022
ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…
ಮಾನ್ಯ #ವಲಸೆರಾಮಯ್ಯ ಅವರೇ, ಯಾವುದು ಹಿತವು ನಿಮಗೆ? ಪಟ್ಟ ಶಿಷ್ಯ ಜಮೀರನ ಜಹಾಗೀರ್ ಚಾಮರಾಜಪೇಟೆಯೊ? ಈಗಿನ ಕ್ಷೇತ್ರ ಬದಾಮಿಯೋ? ಇಲ್ಲ 2018 ಚುನಾವಣೆಯೇ ನಿಮ್ಮ ಕೊನೆಯ ಚುನಾವಣೆ ಅಂದುಕೊಳ್ಳುವುದೋ? ವಲಸೆ ನಾಯಕ ಸಿದ್ದರಾಮಯ್ಯ ಅವರೇ, ಉತ್ತರಿಸುವಿರಾ ಎಂದು ಬಿಜೆಪಿ ಪ್ರಶ್ನಿಸಿದೆ.
ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಗಳ ಮೂಲಕ ಒಂದು ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಜಾತಿ ಜಾತಿಗಳ ಮದ್ಯೆ ಬಿರುಕು ಮೂಡಿಸಿದ ಸಿದ್ದರಾಮಯ್ಯ ಅವರಿಗೆ ತನ್ನದು ಎನ್ನುವ ಒಂದೂ ಕ್ಷೇತ್ರವೂ ಇಲ್ಲ. √ ಕೋಲಾರ √ ಹುಣಸೂರು √ ಚಾಮರಾಜಪೇಟೆ √ ಕೊಪ್ಪಳ, ಮುಂದೆ? #ಆಣೆರಾಮಯ್ಯ ಅವರೇ, ಬಾದಾಮಿ ಜನತೆಗೆ ನಿಮ್ಮ ಅಧಿನಾಯಕಿ ಸೋನಿಯಾ ಮೇಲೆ ಆಣೆ ಮಾಡಿ ಎಂದು ಕುಟುಕಿದೆ. Karnataka bjp slams siddaramaiah statement