`ಬಿಜೆಪಿಗರು ನಕಲಿ ಹಿಂದುಗಳು’ ಎಂದ `ರಾಹುಲ್ ಗೆ ಬಿಜೆಪಿ ಡಿಚ್ಚಿ’ Karnataka bjp saaksha tv
ಬೆಂಗಳೂರು : ದೇವಾಲಯ ತೆರವು ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗಳು ನಕಲಿ ಹಿಂದೂಗಳು. ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ದೂರಿದ್ದರು.
ಇದಕ್ಕೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದ್ದು, ಚುನಾವಣೆಯ ಸಂದರ್ಭದಲ್ಲಿ ನಾನಾ ವೇಷ ಧರಿಸುವ ಟ್ವಿಟ್ಟರ್ ಟ್ರೋಲ್ ಖ್ಯಾತಿಯ ರಾಹುಲ್ ಗಾಂಧಿ ಅವರಿಗೆ ಈಗ ಧರ್ಮದ ನೆನಪಾಗಿದೆ ಎಂದು ಕುಟುಕಿದೆ.
ರಾಹುಲ್ ಅವರು ಒಮ್ಮೆ ಜನಿವಾರಧಾರಿ ಎನ್ನುತ್ತಾರೆ, ಮತ್ತೊಮ್ಮೆ ಕಾಶ್ಮೀರಿ ಪಂಡಿತ ಎನ್ನುತ್ತಾರೆ.
ಕುಟುಂಬದ ಮೂಲಕ್ಕೂ ರಾಹುಲ್ ಗಾಂಧಿ ಹೇಳಿಕೆಗೂ ಯಾವುದೇ ಸಾಮ್ಯತೆಯಿಲ್ಲ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದೆ.









