ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಆಗುವ ಕನಸು : ಸಿದ್ದು ವಿರುದ್ಧ ಕೇಸರಿ ಕಿಡಿ
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕ್ಷೇತ್ರಗಳನ್ನು ಹುಡುಕುತ್ತಿರುವ ಬಗ್ಗೆ ವರದಿಯಾಗಿದೆ. ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. Karnataka bjp vs ex chief minister siddaramaiah tweet war saaksha tv
ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಟೀಕೆಗಳ ಸುರಿಮಳೆಗೈದಿದೆ.

ಗೆಲ್ಲುವುದಕ್ಕೊಂದು ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು. ಸಿದ್ದರಾಮಯ್ಯ ಅವರನ್ನು ಐದಾರು ಕಡೆಯಿಂದ ಯಾರೂ ಕರೆಯುತ್ತಿಲ್ಲ. ಬದಲಾಗಿ ಐದಾರು ಕಡೆಯಲ್ಲಿ ಸುರಕ್ಷಿತ ಸ್ಥಳ ಹುಡುಕುವುದಕ್ಕೆ ಸಿದ್ದರಾಮಯ್ಯ ಅವರು ಹೊರಟಿದ್ದಾರೆ.
ಐದಾರು ಕಡೆಯಿಂದ ನನಗೆ ಕರೆ ಇದೆ ಎಂದು ಸಿದ್ದರಾಮಯ್ಯ ಮತ್ತೊಂದು ಬುರುಡೆ ಬಿಟ್ಟಿದ್ದಾರೆ. ಅಂದರೆ ಐದಾರು ಕಡೆ ನಿರಾಶ್ರಿತರ ಶಿಬಿರ ಸೃಷ್ಟಿಯಾಗಲಿದೆ. ಮಾನ್ಯ ಸಿದ್ದರಾಮಯ್ಯನವರೇ, ಅವರಿವರನ್ನು ಬೀದಿಗೆ ತಳ್ಳುವ ಬದಲು ನಿಮ್ಮ ಪುತ್ರ ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಹೋಗಬಹುದಲ್ಲವೇ? ಪುತ್ರ ವ್ಯಾಮೋಹವೇ ಎಂದು ಟೀಕೆ ಮಾಡಿದೆ.