ಚನ್ನಪಟ್ಟಣ, ಶಿಗ್ಗಾಂವಿ, ಮತ್ತು ಸಂಡೂರು ಕ್ಷೇತ್ರಗಳು 2024ರ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ರಾಜಕೀಯ ತಾಕತ್ತನ್ನು ಪರೋಕ್ಷವಾಗಿ ತೋರಿಸುವ ಹಾಗೂ ನಾಯಕತ್ವದ ಶಕ್ತಿ ಪ್ರದರ್ಶನದ ಅಖಡವಾಗಿ ನಿಂತಿದೆ.
ಚನ್ನಪಟ್ಟಣ:
ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್): ಚನ್ನಪಟ್ಟಣ ಜೆಡಿಎಸ್‌ನ ಹಿಡಿತದಲ್ಲಿರುವ ಕ್ಷೇತ್ರವಾಗಿದ್ದು, ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಪರಂಪರೆಯನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ (ಕಾಂಗ್ರೆಸ್): ಡಿಕೆಶಿ ಈ ಬಾರಿ ಕುಮಾರಸ್ವಾಮಿ ಅವರಿಗೆ ಸವಾಲು ಮಾಡುತ್ತಿರುವುದು ವೈಯಕ್ತಿಕ ಭವಿಷ್ಯದ ದೃಷ್ಟಿಯಿಂದ ಮಹತ್ವವಾಗಿದ್ದು, ಹಾಸನ, ಮಂಡ್ಯ, ಮತ್ತು ರಾಮನಗರದಲ್ಲಿ ಜೆಡಿಎಸ್‌ನ ಪ್ರಾಬಲ್ಯ ತಗ್ಗಿಸುವ ಪ್ರಯತ್ನದಲ್ಲಿದ್ದಾರೆ.
ಶಿಗ್ಗಾಂವಿ:
ಬಸವರಾಜ ಬೊಮ್ಮಾಯಿ (ಬಿಜೆಪಿ): ಈ ಕ್ಷೇತ್ರವು ಬೊಮ್ಮಾಯಿ ಅವರು ಪ್ರತಿನಿಧಿಸುವ ಕ್ಷೇತ್ರ ಈ ಹಿನ್ನಲೆಯಲ್ಲಿ ಬೊಮ್ಮಾಯಿ ಪುತ್ರನನ್ನು ಗೆಲ್ಲಿಸುವುದು ಅವರ ಗೌರವಕ್ಕೆ ದೊಡ್ಡ ಸವಾಲಾಗಿದೆ.
ಸಿದ್ದರಾಮಯ್ಯ (ಕಾಂಗ್ರೆಸ್): ಶಿಗ್ಗಾಂವಿ ಫಲಿತಾಂಶ ಬೊಮ್ಮಾಯಿಯ ಈ ಹಿಂದಿನ ಆಡಳಿತದ ವೈಫಲ್ಯವನ್ನು ತೋರಿಸಬೇಕೆಂಬ ತೀವ್ರ ಇಚ್ಛೆ ಹೊಂದಿರುವ ಸಿದ್ದರಾಮಯ್ಯ ಈ ನಡೆ ಯಾವ ರೀತಿಯಲ್ಲಿ ಫಲ ಕೊಡಲಿದೆ ಕಾದು ನೋಡಬೇಕಿದೆ.
ಸಂಡೂರು:
ಬಿ.ವೈ. ವಿಜಯೇಂದ್ರ (ಬಿಜೆಪಿ): ವಿಜಯೇಂದ್ರ, ತೀವ್ರ ಅತೃಪ್ತಿಗಳ ನಡುವೆಯೂ ಬಿಜೆಪಿ ನಾಯಕರನ್ನೂ ಬೆಂಬಲಿಗರನ್ನೂ ಒಂದಾಗಿ ತರುತ್ತಿದ್ದಾರೆ. ಈ ಕ್ಷೇತ್ರದ ಗೆಲುವು ಅವರಿಗೆ ಯುವ ನಾಯಕನಾಗಿ ಬಲವಾದ ಭವಿಷ್ಯದ ಪುಷ್ಟಿ ನೀಡಲಿದೆ.
ಈ ಮೂವತ್ತು ಕ್ಷೇತ್ರಗಳ ಫಲಿತಾಂಶವು ಕರ್ನಾಟಕದ ರಾಜಕೀಯ ಸಮೀಕರಣಗಳ ಮೇಲೆ ನೇರವಾಗಿ ಪ್ರಭಾವ ಬೀರಲಿದೆ.








