karnataka congress | ಬಿಜೆಪಿಯಲ್ಲಿ ದಮ್ಮು, ತಾಕತ್ತು ಇದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರನ್ನ ಆಯ್ಕೆ ಮಾಡಿ
ಬೆಂಗಳೂರು : ಬಿಜೆಪಿಯಲ್ಲಿ ದಮ್ಮು, ತಾಕತ್ತು & ಆಂತರಿಕ ಪ್ರಜಾಪ್ರಭುತ್ವ ಇದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರನ್ನ ಆಯ್ಕೆ ಮಾಡಿ ತೋರಿಸಲಿ ಎಂದು ರಾಜ್ಯ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಸವಾಲು ಹಾಕಿದೆ.
ಎಐಸಿಸಿ ಅಧ್ಯಕ್ಷ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು, ಖರ್ಗೆ ಬಗ್ಗೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಡಿಯರ್ ಬಿಜೆಪಿ, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಯಾರ ರಬ್ಬರ್ ಸ್ಟಾಂಪ್ ಎಂಬುದು ಜಗತ್ತಿಗೆ ತಿಳಿದ ವಿಚಾರ. ಅಂದಹಾಗೆ ನಡ್ಡಾರನ್ನು ತಾವು ರಿಎಲೆಕ್ಟ್ ಮಾಡಿದ್ದೋ, ರಿಸೆಲೆಕ್ಟ್ ಮಾಡಿದ್ದೋ? ಬಿಜೆಪಿಯಲ್ಲಿ ದಮ್ಮು, ತಾಕತ್ತು & ಆಂತರಿಕ ಪ್ರಜಾಪ್ರಭುತ್ವ ಇದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರನ್ನ ಆಯ್ಕೆ ಮಾಡಿ ತೋರಿಸಲಿ. ಸಾಧ್ಯವೇ?

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತಮ್ಮಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಲು ಸಾಧ್ಯವಾಗದ, ನಾಗಪುರದ ಆದೇಶ ಮೀರಿ ತಮ್ಮ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲದ, ನಾಗಪುರದ ರಬ್ಬರ್ ಸ್ಟಾಂಪ್ಗಳಾದ ಬಿಜೆಪಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ.
ಪ್ರಧಾನಿ ಮೋದಿ, RSSನ ರಬ್ಬರ್ ಸ್ಟಾಂಪ್. ಬಿಜೆಪಿ ರಾಜ್ಯ ಅಧ್ಯಕ್ಷ ನಳಿಕ್ ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ರಬ್ಬರ್ ಸ್ಟಾಂಪ್. ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಶಾ ರಬ್ಬರ್ ಸ್ಟಾಂಪ್, ಬಸವರಾಜ ಬೊಮ್ಮಾಯಿ ಅವರು ಕೇಶವಕೃಪದ ರಬ್ಬರ್ ಸ್ಟಾಂಪ್. ಇಡೀ ಬಿಜೆಪಿ ಪಕ್ಷ ನಾಗಪುರದ ರಬ್ಬರ್ ಸ್ಟಾಂಪ್, ಇಲ್ಲ ಎನ್ನುವಿರಾ ಬಿಜೆಪಿ
ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ ಅಷ್ಟೇ!
– ವಿತ್ತ ಸಚಿವೆಭಾರತದ ಅರ್ಥ ವ್ಯವಸ್ಥೆ ಇಂತವರ ಕೈಗೆ ಸಿಕ್ಕು ನರಳುತ್ತಿರುವುದು 'ಆಕ್ಟ್ ಆಫ್ ಗಾಡ್' ಇರಬಹುದೇನೋ! ಅಲ್ಲವೇ @nsitharaman ಅವರೇ!
ಇಂತಹ ಬೆಪ್ಪುತಕ್ಕಡಿಗಳನ್ನು ಹೊಂದಿರುವ ಬಿಜೆಪಿ ಇತರರ ಬಗ್ಗೆ ಟೀಕಿಸುವುದು ಕಾಗೆ ನವಿಲನ್ನು ಟೀಕಿಸಿದಂತೆಯೇ ಸರಿ.
— Karnataka Congress (@INCKarnataka) October 17, 2022
ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಜರಿಯುವ ಮೂಲಕ ಬಿಜೆಪಿ ತನ್ನ ದಲಿತ ರಾಜಕಾರಣದ ವಿರುದ್ದದ ಅಸಹನೆಯನ್ನು ಕಾರಿಕೊಳ್ಳುತ್ತಿದೆ. ದಲಿತರು, ಹಿಂದುಳಿದ ನಾಯಕರನ್ನು ಅವಮಾನಿಸಿದರೆ ಅವರ ರಾಜಕೀಯ ಸ್ಥೈರ್ಯವನ್ನು ಕುಗ್ಗಿಸಬಹುದು ಎಂಬುದು ಬಿಜೆಪಿಯ ವಿಕೃತ ಧೋರಣೆ. ದಲಿತರ ರಾಜಕೀಯ ಶಕ್ತಿ ಗಟ್ಟಿಗೊಂಡರೆ ಮನುವಾದಕ್ಕೆ ಅಪಾಯ ಎಂಬುದು ಬಿಜೆಪಿಯ ಲೆಕ್ಕಾಚಾರ.
ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ ಅಷ್ಟೇ! – ವಿತ್ತ ಸಚಿವೆ. ಭಾರತದ ಅರ್ಥ ವ್ಯವಸ್ಥೆ ಇಂತವರ ಕೈಗೆ ಸಿಕ್ಕು ನರಳುತ್ತಿರುವುದು ‘ಆಕ್ಟ್ ಆಫ್ ಗಾಡ್’ ಇರಬಹುದೇನೋ! ಅಲ್ಲವೇ ನಿರ್ಮಲಾ ಸೀತಾರಾಮನ್ ಅವರೇ! ಇಂತಹ ಬೆಪ್ಪುತಕ್ಕಡಿಗಳನ್ನು ಹೊಂದಿರುವ ಬಿಜೆಪಿ ಇತರರ ಬಗ್ಗೆ ಟೀಕಿಸುವುದು ಕಾಗೆ ನವಿಲನ್ನು ಟೀಕಿಸಿದಂತೆಯೇ ಸರಿ ಎಂದು ಪ್ರಶ್ನಿಸಿದೆ.