Karnataka congress | ಐಟಿ, ಈಡಿ, ಆಪರೇಷನ್ ಕಮಲಕ್ಕೆ ಬಳಸುವ #Toolkit
ಬೆಂಗಳೂರು : ಐಟಿ, ಈಡಿ, ಸಿಬಿಐನಂತಹ ಸ್ವಾಯುತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಅವು ಬಿಜೆಪಿಯ ದ್ವೇಷ ರಾಜಕೀಯಕ್ಕೆ, ಆಪರೇಷನ್ ಕಮಲಕ್ಕೆ ಬಳಸುವ #Toolkit ಅಷ್ಟೇ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಜಾರಿ ನಿರ್ದೇಶನಾಲಯ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ವಿಚಾರಣೆ ಖಂಡಿಸಿ, ಡೆಲ್ಲಿಯ ಇಡಿ ಮುಖ್ಯ ಕಚೇರಿ ಹಾಗೂ ದೇಶದ ವಿವಿಧ ಇಡಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ಐಟಿ, ಈಡಿ, ಸಿಬಿಐನಂತಹ ಸ್ವಾಯುತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಅವು ಬಿಜೆಪಿಯ ದ್ವೇಷ ರಾಜಕೀಯಕ್ಕೆ, ಆಪರೇಷನ್ ಕಮಲಕ್ಕೆ ಬಳಸುವ #Toolkit ಅಷ್ಟೇ.ನ್ಯಾಷನಲ್ ಹೆರಾಲ್ಡ್ ಪ್ರಕರಣ ನೈಜವಾದುದಲ್ಲ, ಕಾಂಗ್ರೆಸ್ ಮೇಲೆ ಆರೋಪಗಳನ್ನು ಜೀವಂತವಾಗಿಡುವ ದುರುದ್ದೇಶ ಹಾಗೂ ದ್ವೇಷದ ಪ್ರಯತ್ನ.
https://twitter.com/INCKarnataka/status/1536233720004235266?s=20&t=hx4tT3To8EdDcnv-A0ANJw
ಜೀಪ್ ಹಗರಣ ಎನ್ನುವುದರಿಂದ ಹಿಡಿದು 2ಜಿ ಹಗರಣ ಎಂಬುದರವರೆಗೂ ಬಿಜೆಪಿಯ ಯಾವ ಆರೋಪಗಳೂ ಸಾಬೀತಾಗಿಲ್ಲ, ಅವುಗಳಲ್ಲಿ ಲೋಪವೂ ಕಂಡುಬಂದಿಲ್ಲ.ಇವೆಲ್ಲವೂ ಬಿಜೆಪಿಯ ದ್ವೇಷ ರಾಜಕೀಯದ ಬಾಗವಷ್ಟೇ. ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ತೇಜೋವಧೆಗೆ ಐಟಿ, ಈಡಿಯನ್ನು ಬಳಸಿಕೊಳ್ಳುತ್ತಿದೆ ಬಿಜೆಪಿ.
ನ್ಯಾಷನಲ್ ಹೆರಾಲ್ಡ್”ಭಾರತದ ಸ್ವತಂತ್ರ ಚಳವಳಿಯ ಬಾಗವಾಗಿ ಹುಟ್ಟಿಕೊಂಡ ಪತ್ರಿಕೆ, ಭಾರತದ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಪತ್ರಿಕೆ. ಸ್ವತಂತ್ರದ ಬೆಲೆ ಅರಿಯದ ಬಿಜೆಪಿ ಇಂದು ದ್ವೇಷಕ್ಕೆ ನ್ಯಾಷನಲ್ ಹೆರಾಲ್ಡ್‌ನ್ನು ಬಳಸುತ್ತಿದೆ.ಬಿಜೆಪಿಯ ಕೀಳು ರಾಜಕೀಯದ ಆಯಸ್ಸು ಶೀಘ್ರದಲ್ಲಿ ಮುಗಿಯಲಿದೆ ಎಂದು ಎಚ್ಚರಿಕೆ ನೀಡಿದೆ.