Congress | ರಸಗೊಬ್ಬರಕ್ಕೆ ರೈತರ ಪರದಾಟ : ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು : ರಸಗೊಬ್ಬರ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ರಸಗೊಬ್ಬರದ ಕೊರತೆ ಉಂಟಾಗಿ ಹಲವು ದಿನಗಳಾದ್ರೂ ಗಮನಿಸದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸಿನೆಮಾ ಶೂಟಿಂಗ್ ನಲ್ಲಿ ಮಗ್ನರಾಗಿದ್ದಾರೆ ಎಂದು ಟೀಕೆ ಮಾಡಿದೆ.
ಚನ್ನಪಟ್ಟಣ ತಾಲೂಕಿನಲ್ಲಿ ಯೂರಿಯಾ ಸಮಸ್ಯೆ ಉಂಟಾಗಿದೆ. ಗೊಬ್ಬರಕ್ಕಾಗಿ ರೈತರು ದಿನ ಪೂರ್ತಿ ಟಿಎಪಿಸಿಎಂಎಸ್ ರಸಗೊಬ್ಬರದ ಅಂಗಡಿ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡಿದೆ. ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ರಸಗೊಬ್ಬರದ ಬೆಲೆ ಏರಿಕೆ, ನಕಲಿ ರಸಗೊಬ್ಬರದ ಹಾವಳಿ, ರಸಗೊಬ್ಬರದ ಕೊರತೆ..ರಸಗೊಬ್ಬರದ ವಿಷಯದಲ್ಲಿ ರೈತರಿಗೆ ಹಲವಾರು ಸಮಸ್ಯೆ ಹಾಗೂ ವಂಚನೆಯಾಗುತ್ತಿದೆ. ರಸಗೊಬ್ಬರದ ಕೊರತೆ ಉಂಟಾಗಿ ಹಲವು ದಿನಗಳಾದರೂ ಗಮನಿಸದ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಿನೆಮಾ ಶೂಟಿಂಗ್ನಲ್ಲಿ ಮಗ್ನರಾಗಿದ್ದಾರೆ, ಇಂತವರಿಂದ ರೈತರ ಉದ್ದಾರ ಸಾಧ್ಯವೇ ಎಂದು ಪ್ರಶ್ನಿಸಿದೆ.
ಇದೇ ವೇಳೆ ತೈಲ ಬೆಲೆ ಏರಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿವೆ ಇಂಧನ ಕಂಪೆನಿಗಳು, ಆದರೆ ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೆ ಕಂಪೆನಿಗಳ ಸಹಕಾರಕ್ಕೆ ನಿಂತಿದೆ. ಇಂಧನ ಕಂಪೆನಿಗಳ ಖಾಸಗೀಕರಣ, ಏಕಸ್ವಾಮ್ಯತೆಯಿಂದಾಗಿ ಮುಂದೆ ಏನೇನು ಅವಾಂತರ ಸೃಷ್ಟಿಯಾಗುತ್ತದೆಯೋ. ಎಂದು ಪ್ರಶ್ನಿಸಿದೆ.