Congress vs bjp | ಸಿನಿಮಾ ತೋರಿಸುವ ಬದಲು, ಬದುಕುವ ದಾರಿ ತೋರಿಸಿ
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಸಿಎಂ ಬೊಮ್ಮಾಯಿಯವರೇ.. ಕಾಶ್ಮೀರ್ ಫೈಲ್ಸ್ ಚಲನಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ಕೊಟ್ಟಿದ್ದಿರಿ.
ಆದೇ ರೀತಿ ಇಂಧನತೈಲಗಳಿಗೆ ತೆರಿಗೆ ಕಡಿತಗೊಳಿಸುವುದು ಯಾವಾಗ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಸಿಎಂ ಬೊಮ್ಮಾಯಿಯವರೇ.. ಕಾಶ್ಮೀರ್ ಫೈಲ್ಸ್ ಚಲನಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ಕೊಟ್ಟಿದ್ದಿರಿ.
ಆದೇ ರೀತಿ ಇಂಧನತೈಲಗಳಿಗೆ ತೆರಿಗೆ ಕಡಿತಗೊಳಿಸುವುದು ಯಾವಾಗ? ಸಿನಿಮಾ ತೋರಿಸುವ ಬದಲು, ಬದುಕುವ ದಾರಿ ತೋರಿಸಿ ಎಂದು ಕುಟುಕಿದೆ.
ಅಲ್ಲದೇ ತೈಲ ಕಂಅಪೆನಿಗಳು ಸಮರ್ಪಕವಾಗಿ ಇಂಧನ ಪೂರೈಕೆ ಮಾಡಲು ಹಿಂದೇಟು ಹಾಕುತ್ತಿರುವುದೇಕೆ?
ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿವೆ ಇಂಧನ ಕಂಪೆನಿಗಳು, ಆದರೆ ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೆ ಕಂಪೆನಿಗಳ ಸಹಕಾರಕ್ಕೆ ನಿಂತಿದೆ.
ಇಂಧನ ಕಂಪೆನಿಗಳ ಖಾಸಗೀಕರಣ, ಏಕಸ್ವಾಮ್ಯತೆಯಿಂದಾಗಿ ಮುಂದೆ ಏನೇನು ಅವಾಂತರ ಸೃಷ್ಟಿಯಾಗುತ್ತದೆಯೋ.! ಎಂದು ಅನುಮಾನ ವ್ಯಕ್ತಪಡಿಸಿದೆ.