Karnataka | ಕಾಂಗ್ರೆಸ್ ಗೆದ್ದರೇ 10 ಕೆ.ಜಿ. ಉಚಿತ ಅಕ್ಕಿ

1 min read
Congress Saaksha Tv

Karnataka | ಕಾಂಗ್ರೆಸ್ ಗೆದ್ದರೇ 10 ಕೆ.ಜಿ. ಉಚಿತ ಅಕ್ಕಿ

ಬೆಂಗಳೂರು : ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೇ 10 ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸಹಮತ ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಅನ್ನಭಾಗ್ಯದಂತಹ ಐತಿಹಾಸಿಕ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್.

ಬಡವರ ಹಸಿವು ನೀಗಿಸುವ ಕಾರ್ಯಕ್ರಮಗಳನ್ನು ನೀಡುವ ಘನತೆ ಹಾಗು ಕ್ಷಮತೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪುನಃ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಸನ್ಮಾನ್ಯ ಸಿದ್ದರಾಮಯ್ಯನವರು ಘೋಷಿಸಿದ್ದು ಕಾಂಗ್ರೆಸ್ ಇದಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ.

Karnataka Congress wins 10 kg Free rice  Saaksha Tv
Karnataka Congress wins 10 kg Free rice Saaksha Tv

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಸರ್ಕಾರದ ಅಚ್ಛೆ ದಿನಗಳ ಬಣ್ಣ ಬಯಲಾಗಿದೆ.

ಅಡುಗೆ ಸಿಲಿಂಡರ್ ಹೆಸರಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದ ಬಿಜೆಪಿ ಈಗ ಮೌನವಹಿಸಿದ್ದೇಕೆ? ಹೀಗೆಯೇ ಮುಂದುವರಿದಲ್ಲಿ ಮೋದಿಯವರು “ಪ್ರಧಾನಮಂತ್ರಿ ಸೌದೆ ಯೋಜನೆ” ಘೋಷಿಸಿದರೂ ಆಶ್ಚರ್ಯವಿಲ್ಲ!

ಸೌದೆಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವಿರಾ, ಪೆಟ್ರೋಲ್ ಬಂಕಲ್ಲಿ ಹಂಚುವಿರಾ ಎಂದು ಅನಿಲ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. Karnataka Congress wins 10 kg Free rice

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd