ರಾಜ್ಯದಲ್ಲಿಂದು 239 ಮಂದಿಗೆ ಕೊರೊನಾ ಸೋಂಕು ದೃಢ corona cases saaksha tv
ಬೆಂಗಳೂರು : ರಾಜ್ಯದಲ್ಲಿ ಇಂದು 239 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 29,88,760 ಕ್ಕೆ ಏರಿಕೆ ಕಂಡಿದೆ.
ಇವತ್ತು ಹೆಮ್ಮಾರಿ ಸೋಂಕಿಗೆ ಐವರು ಕೊನೆಯುಸಿರೆಳೆದಿದ್ದು, ಈವರೆಗೂ ರಾಜ್ಯದಲ್ಲಿ ಕೊರೊನಾ 38,089 ಮಂದಿ ಬಲಿಯಾದಂತಾಗಿದೆ.
ಇನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 376 ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ಧಾರೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,42,272ಕ್ಕೆ ಏರಿದೆ.
ಇತ್ತ ಸಕ್ರಿಯ ಪ್ರಕರಣಗಳು 8,370ರಷ್ಟು ಇವೆ. ಜೊತೆಗೆ ಪಾಸಿಟಿವಿಟಿ ದರ ಶೇ.0.39 ರಷ್ಟಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಲ್ಲಿ 139 ಜನರಿಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 12,52,106ಕ್ಕೆ ಏರಿದೆ. 190 ಜನ ಗುಣಮುಖರಾಗಿದ್ದು, ಈವರೆಗೆ 12,29,397 ಜನ ಡಿಸ್ಚಾರ್ಜ್ ಆಗಿದ್ದಾರೆ.
3 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,284ಕ್ಕೆ ಏರಿದೆ. ಬೆಂಗಳೂರಿನಲ್ಲಿನ್ನೂ 6424 ಸಕ್ರಿಯ ಪ್ರಕರಣಗಳಿವೆ.