Femina Miss India 2022 | ಕನ್ನಡತಿಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ 2022 !
21 ವರ್ಷದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್
ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಫಿನಾಲೆ
ರೂಬಲ್ ಶೆಖಾವತ್ ಮಿಸ್ ಇಂಡಿಯಾ ರನ್ನರ್ ಅಪ್
14ನೇ ವಯಸ್ಸಿನಲ್ಲಿ ಭರತನಾಟ್ಯ ರಂಗ ಪ್ರವೇಶ
ಮುಂಬೈ : ಕರ್ನಾಟಕದ ಮೂಲದ 21 ವರ್ಷದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆ ನಡೆಯಿತು.
ಇದರಲ್ಲಿ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022ರ ಪ್ರಶಸ್ತಿ ಗೆದ್ದರೇ ರಾಜಸ್ಥಾನದ ರೂಬಲ್ ಶೆಖಾವತ್ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆಗಿದ್ದಾರೆ.

ಎರಡನೇ ರನ್ನರ್ ಅಪ್ ಆಗಿ ಉತ್ತರ ಪ್ರದೇಶದ ಶಿನಾತಾ ಚೌಹಾನ್ ಪ್ರಶಸ್ತಿ ಗೆದ್ದಿದ್ದಾರೆ.
ಇವರನ್ನು ಹೊರತು ಪಡಿಸಿ ಪ್ರಜ್ಞಾ ಅಯ್ಯಗಾರಿ ಮತ್ತು ಗಾರ್ಗಿನಂದಿ ನಂತರದ ಸ್ಥಾನಗಳಲ್ಲಿದ್ದಾರೆ.
ಕರ್ನಾಟಕದ ಮೂಲದ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದ್ದು, ಅಕೌಂಟಿಂಗ್ ಮತ್ತು ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.