ದಾಂಪತ್ಯ ಜೀವನಕ್ಕೆ ಕಾಲಿಟ್ಟ RX 100 ಖ್ಯಾತಿಯ ತೆಲುಗು ನಟ ಕಾರ್ತಿಕೇಯ
RX 100 ಖ್ಯಾತಿಯ ತೆಲುಗು ನಾಯಕ ನಟ ಕಾರ್ತಿಕೇಯ ಅವರು ಬಹುದಿನಗಳ ಗೆಳತಿ ಲೋಹಿತಾ ಅವರನ್ನ ಅಗ್ನಿಸಾಕ್ಷಿಯಾಗಿ ಕೈಹಿಡಿದಿದ್ದಾರೆ.
ನಟ ಕಾರ್ತಿಕೇಯ 11 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ಲೋಹಿತಾ ಅವರನ್ನ ನಿನ್ನೆ ಬೆಳಗ್ಗೆ 9 ಗಂಟೆ 47 ನಿಮಿಷಕ್ಕೆ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಸ್ವತಃ ಮೆಗಾಸ್ಟಾರ್ ಚಿರಂಜೀವಿ ಮದುವೆಗೆ ಆಗಮಿಸಿ ನವ ದಂಪತಿಗಳನ್ನು ಆಶೀರ್ವದಿಸಿದ್ದಾರೆ.
ಲೋಹಿತಾ.. ವಾರಂಗಲ್ನಲ್ಲಿ ಎನ್ಐಟಿ ವಿದ್ಯಾರ್ಥಿನಿಯಾಗಿದ್ದಾಗ ಕಾರ್ತಿಕೇಯನ್ಗೆ ಪರಿಚಯವಾಗಿದ್ದರು. ಕಾರ್ತಿಕೇಯನ್ ಹೀರೋ ಆಗಿ ಸಕ್ಸಸ್ ಕಂಡ ಬಳಿಕ ಎರಡು ಮನೆಯವರ ಮನವೊಲಿಸಿ ಮದುವೆಯಾಗಿದ್ದಾರೆ. ಸಿನಿಮಾದ ಬಗ್ಗೆ ಹೇಳುವುದಾದರೆ ಕಾರ್ತಿಕೇಯನ್ ಅವರ ‘ರಾಜಾ ವಿಕ್ರಮಾರ್ಕ’ ಬಿಡುಗಡೆಯಾಗಿತ್ತು. ಸದ್ಯ ‘ವಲಿಮಾಯಿ’ ಚಿತ್ರದಲ್ಲಿ ತಲಾ ಅಜಿತ್ ವಿಲನ್ ಆಗಿ ನಟಿಸುತ್ತಿದ್ದಾರೆ.