Kaun Banega Crorepati : ಕೋಟಿ ಗೆದ್ದ ಗೃಹಿಣಿ, 7.5 ಕೋಟಿ ಪ್ರಶ್ನೆಗೆ ಸಿದ್ಧ…
ಕಿರುತೆರೆಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಸೀಸನ್ 14 ನಲ್ಲಿ ಕೊನೆಗೂ ಕೋಟ್ಯಾಧಿಪತಿಯೊಬ್ಬರು ಸಿಕ್ಕಿದ್ದಾರೆ. ಕೊಲ್ಲಾಪುರದಿಂದ ಗೃಹಿಣಿ ಕವಿತಾ ಚಾವ್ಲಾ 1 ಕೊಟಿ ರುಪಾಯಿ ಗೆದ್ದಿದ್ದು, 7.5 ಕೋಟಿ ಪ್ರಶ್ನೆ ಎದುರಿಸಲು ಸಿದ್ದರಾಗಿದ್ದಾರೆ.
ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮುಂಬರುವ ಸಂಚಿಕೆಯ ಟೀಸರ್ ಅನ್ನ ಹಂಚಿಕೊಂಡಿದೆ “ಗೃಹಿಣಿ_ಕವಿತಾಚಾವ್ಲಾ ರೂ. 1 ಕೋಟಿ ಗೆದ್ದು, KBC ಸೀಸನ್ 14 ರಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ ಎಂದು ಹೇಳಿದೆ.
https://www.instagram.com/p/CimJ6QqBjlU/?utm_source=ig_embed&utm_campaign=embed_video_watch_again
ಕವಿತಾ ಪ್ರತಿಕೆಯೊಂದಕ್ಕೆ ಮಾತನಾಡಿ, 2000ನೇ ಇಸವಿಯಿಂದ ಕೆಬಿಸಿಯ ಭಾಗವಾಗಲು ಬಯಸಿದ್ದೆ, ಆದರೆ ಪ್ರತಿ ಬಾರಿಯೂ ವಿಫಲವಾಗುತ್ತಿದ್ದೆ. ಕಳೆದ ವರ್ಷ, ಮೊದಲ ಸುತ್ತು ತಲುಪಿದ್ದರು ಹಾಟ್ ಸೀಟ್‌ಗೆ ಹೋಗಲು ಸಾಧ್ಯವಾಗಲಿಲ್ಲ. 1 ಕೋಟಿ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. “ನಾನು ನಿಜವಾಗಿಯೂ 7.5 ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರಿಸಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
45 ವರ್ಷದ ಕವಿತ ತನ್ನ ಮಗ ವಿವೇಕ್ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಲು ಹಣವನ್ನು ಬಳಸುವುದಾಗಿ ತಿಳಿಸಿದ್ದಾರೆ. ಮತ್ತು 7.5 ಕೋಟಿ ರೂಪಾಯಿಗಳ ಮುಂದಿನ ಪ್ರಶ್ನೆಯನ್ನು ಗೆದ್ದರೆ, ನಾನು ನನ್ನ ಸ್ವಂತ ಮನೆ ನಿರ್ಮಿಸಿಕೊಳ್ಳುತ್ತೇನೆ ಮತ್ತು ಪ್ರಪಂಚವನ್ನು ಸುತ್ತುತ್ತೇನೆ” ಎಂದು ಅವರು ಹೇಳಿದರು.