ರಾಜ್ಯ ಸಚಿವ ಸಂಪುಟದಿಂದ ನೂತನ ಮರಳು ನೀತಿಗೆ ಅನುಮೋದನೆ new sand policy saaksha tv
ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ನೂತನ ಮರಳು ನೀತಿಗೆ ಅನುಮೋದನೆ ನೀಡಿದೆ
ನೂತನ ಮರಳು ನೀತಿಯ ಪ್ರಮುಖ ಅಂಶಗಳು
ಕಡಿಮೆ ಬೆಲೆಗೆ ಮರಳು ಪೂರೈಕೆ.
ಆನ್ಲೈನ್ನಲ್ಲಿ ಮರಳು ಮಾರಾಟ, ಖರೀದಿಗೆ ಅವಕಾಶ.
ಆನ್ಲೈನ್ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಜಾಗದಲ್ಲಿ ಮಾರಾಟ ಮಾಡಲು ಅವಕಾಶ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮೆಟ್ರಿಕ್ ಟನ್ಗೆ 300 ರೂಪಾಯಿ ನಿಗದಿ.
ಗ್ರಾಮ ಪಂಚಾಯತ್ ಹೊರತು ಪಡಿಸಿ ಇತರರ ಪ್ರದೇಶದಲ್ಲಿ ಪ್ರತಿ ಮೆಟ್ರಿಕ್ ಟನ್ಗೆ 700 ರೂಪಾಯಿ ನಿಗದಿ.
ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಮರಳು ಸಾಗಾಟಕ್ಕೆ ಅನುಮತಿ.
ಸಮಯದ ಮಿತಿ ಮೀರಿದ ಸಾಗಾಟವನ್ನು ಅಕ್ರಮ ಎಂದು ಪರಿಗಣನೆ.
ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಯಲ್ಲೂ ಮರಳನ್ನು ಸಾಗಿಸಲು ಅನುಮತಿ.