ಕೆಜಿಎಫ್ 3 ಬರೋದು ಪಕ್ಕಾ – ಆಕ್ಟೋಬರ್ ನಿಂದ ಶೂಟಿಂಗ್ ಎಂದ ನಿರ್ಮಾಪಕರು  

1 min read

ಕೆಜಿಎಫ್ 3 ಬರೋದು ಪಕ್ಕಾ – ಆಕ್ಟೋಬರ್ ನಿಂದ ಶೂಟಿಂಗ್ ಎಂದ ನಿರ್ಮಾಪಕರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. 25 ದಿನಗಳು ದಾಟಿ ಮುನ್ನಡೆದರೂ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಕೆಜೆಎಫ್ ಥಿಯೇಟರ್ ನಲ್ಲಿ ಇರುವಾಗಲೆ ಕೆಜಿಎಫ್ 3 ಚಿತ್ರದ ಚರ್ಚೆಗಳು ಗರಿಗೆದರಿವೆ….

ಕೆಜಿಎಫ್ ಚಾಪ್ಟರ್ 2 ನೋಡಿದ ಯಾರಿಗೇ ಆದರೂ ಕೆಜಿಎಫ್ ನ ಮುಂದುವರೆದ ಭಾಗವಾಗಿ ಪಾರ್ಟ್ 3 ಬರಲಿದೆ ಎನ್ನುವುದು ಅರ್ಥವಾಗಿಬಿಡುತ್ತದೆ. ಅಭಿಮಾನಿಗಳು ಸಹ  ಕೆಜೆಎಫ್ ಪ್ರಾಂಚೈಸಿ ಮುಂದುವರೆಯಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಅಭಿಮಾನಿಗಳಿಸಿ ಸಿಹಿ ಸುದ್ದಿ ಕೊಟ್ಟಿದ್ದಾರೆ ಕೆಜೆಎಫ್ ನಿರ್ಮಾಪಕ ವಿಜಯ್ ಕಿರಗಂದೂರ್

‘ಅಕ್ಟೋಬರ್ ಒಳಗೆ ಸಲಾರ್ ಸಿನಿಮಾದ ಶೂಟಿಂಗ್ ಮುಗಿಸಬೇಕೆಂದು ತೀರ್ಮಾನ ಮಾಡಿದ್ದೇವೆ. ಅಂದುಕೊಂಡಂತೆ ಆ ಸಿನಿಮಾದ ಕೆಲಸ ಮುಗಿದರೆ, ಅಕ್ಟೋಬರ್ ನಿಂದಲೇ ಕೆಜಿಎಫ್ 2 ಸಿನಿಮಾದ ಕೆಲಸ ಆರಂಭಿಸಲಿದ್ದೇವೆ’  ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಅಲ್ಲಿಗೆ ಕೆಜಿಎಫ್ ಪಾರ್ಟ್ 3 ಬರಲಿದೆ ಎನ್ನುವುದು ಪಕ್ಕಾ…

ಕೆಜಿಎಫ್ 2 ಸಿನಿಮಾದಲ್ಲಿ ನಾಯಕ ಬದುಕಿದನಾ ಅಥವಾ ಸತ್ತನಾ ಎನ್ನುವುದು ಅಸ್ಪಷ್ಟ. ಹಾಗಾಗಿ ಯಶ್ ಅವರೇ ಈ ಸಿನಿಮಾದ ನಾಯಕ ಆಗುತ್ತಾರಾ? ಅಥವಾ ಕೆಜಿಎಫ್ 3 ನಲ್ಲಿ ಬೇರೆ ನಾಯಕ ಇರಲಿದ್ದಾರೆ ಎನ್ನುವುದಕ್ಕೆ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ, ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ರೀತಿಯಲ್ಲಿ ಪಾತ್ರಗಳನ್ನು ಬದಲಾಯಿಸಿದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿನಿಮಾವನ್ನು ತಲುಪಿಸಬಹುದು’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ನಿರ್ಮಾಪಕರು.

ಈಗಾಗಲೇ ಕೆಜಿಎಫ್ 3 ಚಿತ್ರದ ಕುರಿತು ಗಾಸಿಪ್ ಗಳು ಹರಿದಾಡುತ್ತಿದ್ದು, ಚಿತ್ರದ ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೆಜಿಎಫ್  ಎಂಬ ಸರಣಿ ಇಲ್ಲಿಗೆ ಮುಗಿಯದೇ ಮುಮದುವರೆಯುತ್ತಿರುವುದಂತೂ ಖಚಿತ

KFG Chapter 3 shoot to begin after October, producer confirms creating ‘Marvel kind of universe’

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd