ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!
ಭಾರತೀಯ ಸಿನಿಮಾರಂಗದ ಒನ್ ಆಫ್ ದ ಹೈ ವೋಲ್ಟೇಜ್ , ಹೈಲೀ ಎಕ್ಸ್ ಪೆಕ್ಟೆಡ್, ಹೈ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2. ಜುಲೈ 16 ಕ್ಕೆ ರಿಲೀಸ್ ಆಗಲಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ಕಾಂಬಿನೇಷನ್ ನ ಈ ಸಿನಿಮಾ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ಕಾದುಕುಳಿತಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ರಿಲೀಸ್ ಆದ ಟೀಸರ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಇದರ ನಡುವೆ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ 65 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ ಅನ್ನೋ ಅಪ್ ಡೇಟ್ಸ್ ಸಿಕ್ಕಿದೆ.
ಆದ್ರೆ ರಾಖಿ ಭಾಯ್ ಫ್ಯಾನ್ಸ್ ಗೆ ಸೂಪರ್ ಇಂಟ್ರೆಸ್ಟಿಂಗ್ ಎಕ್ಸೈಟಿಂಗ್ ನ್ಯೂಸ್ ಒಂದು ಸಿಕ್ಕಿದೆ. ಹೌದು ಅದೇನೆಂದ್ರೆ ಹಿಂದಿಯಲ್ಲಿ ಖುದ್ದು ಯಶ್ ಅವರೇ ತಮ್ಮ ವಾಯ್ಸ್ ನ ಡಬ್ ಮಾಡಲಿದ್ದಾರಮತೆ. ಹೌದು ಬಲ್ಲ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಯಶ್ ಅವರು ತಮ್ಮ ಡೈಲಾಗ್ ಗಳಿಗೆ ಹಿಂದಿಯಲ್ಲಿ ತಾವೇ ಡಬ್ ಮಾಡಲಿದ್ದಾರೆ ಎಂದೇ ಹೇಳಲಾಗ್ತಿದೆ. ಆದ್ರೆ ಅಧಿಕೃತವಾಗಿ ಈ ಬಗ್ಗೆ ಸಿನಿಮಾತಂಡ ಎಲ್ಲೂ ಮಾಹಿತಿ ರಿವೀಲ್ ಮಾಡಿಲ್ಲ.
ಅಂದ್ಹಾಗೆ ಪ್ರಶಾಂತ್ ನೀಲ್ ಸಾರಥ್ಯದ ಸಿನಿಮಾದಲ್ಲಿ ಯಶ್ ರಾಖಿ ಭಾಯ್ ಆಗಿ ಅಬ್ಬರಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಮಿಂಚುತ್ತಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಪ್ರಕಾಶ್ ರಾಜ್, ರವೀನಾ ತಂಡನ್, ಮಾಳವಿಕಾ, ಸಂಜಯ್ ದತ್ ಹೀಗೆ ಹಲವರು ಕಾಣಿಸಿಕೊಳ್ತಾಯಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ಅಡಿ ಮೂಡಿ ಬರುತ್ತಿರುವ ಚಿತ್ರಕ್ಕೆ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡಿದ್ದಾರೆ.
‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..?