ಕೆಜಿಎಫ್ + ಸಲಾರ್ = ಕೆಜಿಎಫ್ 3. ಒಟ್ಟಿಗೆ ನಟಿಸುತ್ತಾರಾ ಯಶ್ ಮತ್ತು ಪ್ರಭಾಸ್ ??
ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ, 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿರುವ ಅಭಿಮಾನಿಗಳಲ್ಲಿ ಕೆಜೆಎಫ್ ಚಾಪ್ಟರ್ 3 ಕುರಿತು ಕುತೂಹಲ ಗರಿಗೆದರಿದೆ. ಚಿತ್ರದ ಕ್ರೆಡಿಟ್ ಸಾಂಗ್ ನ ಮಧ್ಯದಲ್ಲಿ ಬರುವ ಆ ಸನ್ನಿವೇಶ ಕೆಜಿಎಫ್ 3 ಸುಳಿವು ಕೊಟ್ಟಿದೆ, ಇದರು ಕುರಿತು ಅಭಿಮಾನಿಗಳು ತಮ್ಮದೇ ಕಥೆ ಸೃಷ್ಠಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕುರಿತು ಹಲವು ಗಾಸಿಪ್ ಗಳು ಕೇಳಿ ಬರುತ್ತಿವೆ.
ಕೆಜಿಎಫ್ ನ ಮುಂದುವರೆದ ಭಾಗ ಸಲಾರ್? ಕೆಜೆಫ್ 3 ಚಿತ್ರದಲ್ಲಿ ಪ್ರಭಾಸ್ ಪಾತ್ರ – ಈ ಎರಡು ವಿಷಯಗಳು ಸಧ್ಯದ ಸಿನಿಮಾ ಫೀಲ್ಡ್ ನಲ್ಲಿ ಹಾಟ್ ಗಾಸಿಪ್ ಗಳು.
ಕೆಜಿಎಫ್ ಚಿತ್ರ ನೋಡಿದಾಗ ಅಧೀರಾನನ್ನ ಎದುರು ಹಾಕಿಕೊಳ್ಳುವ ಹಡುಗನ ಪಾತ್ರ ಬರುತ್ತೆ. ಈ ಪಾತ್ರವನ್ನ ಶರಣ್ ಎನ್ನುವ ಹುಡುಗ ನಟಿಸಿದ್ದಾನೆ. ಹುಡುಗನ ಅಮ್ಮನ ಪಾತ್ರದಲ್ಲಿ ಈಶ್ವರಿ ರಾವ್ ಅವರು ನಟಿಸಿದ್ದಾರೆ. ಆ ಹುಡುಗ ಸಿನಿಮಾದಲ್ಲಿ ಸಾವನ್ನಪ್ಪಿರುವಂತೆ ತೋರಿಸುತ್ತಾರೆ ಆದರೇ ಸಿನಿಮಾದಲ್ಲಿ ಮುಖ ತೋರಿಸುವುದಿಲ್ಲ. ಅದೇ ಹುಡುಗ ಸಲಾರ್ ಚಿತ್ರದ ಹೀರೋ ಪ್ರಭಾಸ್ ಎಂದು ಅಭಿಮಾನಿಗಳು ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ ಕಾರಣ ಈಶ್ವರಿ ರಾವ್ ಕೆಜಿಎಫ್ ನಲ್ಲಿ ನಟಿಸಿದ್ದ ಈಶ್ವರಿ ರಾವ್ ಅವರು ಕೂಡ ಸಲಾರ್ ನಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಯಶ್ ಹಿಡಿದ ಗನ್ ಅನ್ನೇ ಸಲಾರ್ ನಲ್ಲಿ ಪ್ರಭಾಸ್ ಹಿಡಿದ್ದಾರೆ. ಎರಡೂ ಚಿತ್ರಗಳಲ್ಲಿ ಗಣಿಗಾರಿಕೆಯ ವಿಷಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಜಿಎಫ್ ಚಿತ್ರ ತಂಡವೇ ಸಲಾರ್ ಅನ್ನ ನಿರ್ಮಿಸುತ್ತಿದೆ. ಇವರೆಲ್ಲೂ ಸೇರಿಕೊಂಡು ಹೊಸ ಪ್ರಪಂಚನ್ನೆ ಸೃಷ್ಟಿಸುವ ಹಾಗೆ ಕಾಣಿಸುತ್ತಿದೆ.
ಸಲಾರ್ ನಂತರ ಕೆಜೆಎಫ್ 3 ಚಿತ್ರ ಶುರುವಾಗದಲಿದ್ದು ಇದರಲ್ಲಿ ಎರಡೂ ಪಾತ್ರಗಳು ಒಟ್ಟಿಗೆ ನಟಿಸಲಿವೆ ಎನ್ನುವುದು ಅಭಿಮಾನಿಗಳು ಯೋಚಿಸುತ್ತಿರುವ ಪರಿ ಆದರೇ ಇದೆಲ್ಲವೂ ಗಾಸಿಪ್ ಕೇವಲ ಅಭಿಮಾನಿಗಳ ಮಾತುಗಳಷ್ಟೆ ಚಿತ್ರತಂಡ ಕುರಿತು ಅಧಿಕೃತವಾಗಿ ಯಾವ ಮಾತನ್ನೂ ಹೇಳಿಲ್ಲ.
KGF + Salar = KGF 3. Acting together Yash and Prabhas ??