ಖದೀಮರು ಕಾರಿನಲ್ಲಿ ಬಂದು ಮೇಕೆ ಕಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ.
ಆರೋಪಿಗಳು ಕಾರಿನಲ್ಲಿ ದೊಡ್ಡ ವ್ಯಕ್ತಿಗಳಂತೆ ಬಂದು ಹಗಲು ಹೊತ್ತಿನಲ್ಲಿಯೇ ಮೇಕೆ ಕದ್ದೊಯ್ದಿದ್ದಾರೆ. ಬಿಹಾರದ ಬೇಗುಸರೈ ಜಿಲ್ಲೆಯ ಪಟೇಲ್ ಚೌಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳ್ಳರ ಕರಾಮತ್ತು ಸಿಸಿಟಿಯಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.