ಮುಂಬೈನಲ್ಲಿ ದಾಳಿ ನಡೆಸುವುದಾಗಿ ಖಲಿಸ್ತಾನ್ ಭಯೋತ್ಪಾದಕರ ಬೆದರಿಕೆ, ಎಲ್ಲ ಪೊಲೀಸರ ರಜೆ ರದ್ದು!
1 min read
ಮುಂಬೈನಲ್ಲಿ ದಾಳಿ ನಡೆಸುವುದಾಗಿ ಖಲಿಸ್ತಾನ್ ಭಯೋತ್ಪಾದಕರ ಬೆದರಿಕೆ, ಎಲ್ಲ ಪೊಲೀಸರ ರಜೆ ರದ್ದು!
ಮುಂಬೈನಲ್ಲಿ ದಾಳಿ ನಡೆಸುವುದಾಗಿ ಖಲಿಸ್ತಾನ್ ಭಯೋತ್ಪಾದಕರು ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಪೊಲೀಸರು ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹೊಸ ವರ್ಷಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಶುಕ್ರವಾರದಂದು ಎಲ್ಲ ಪೊಲೀಸರ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂಬೈನಲ್ಲಿ ನಿಯೋಜನೆಗೊಂಡಿರುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ.
ಮುಂಬೈ ನಗರದಲ್ಲಿ ಖಲಿಸ್ತಾನಿ ಉಗ್ರರು ಭಯೋತ್ಪಾದಕ ದಾಳಿ ನಡೆಸಬಹುದು ಎಂಬ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ನಗರದ ಪ್ರಮುಖ ನಿಲ್ದಾಣಗಳಾದ ದಾದರ್, ಬಾಂದ್ರಾ ಚರ್ಚ್ಗೇಟ್, ಸಿಎಸ್ಎಂಟಿ, ಕುರ್ಲಾ ಮತ್ತು ಇತರ ನಿಲ್ದಾಣಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಕಮಿಷನರ್ ಕೈಸರ್ ಖಾಲಿದ್ ತಿಳಿಸಿದ್ದಾರೆ. ನಾಳೆ 3000 ಕ್ಕೂ ಹೆಚ್ಚು ರೈಲ್ವೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು.