Kiara Advani- Sidharth Malhotra | ಕಿಯಾರಾ – ಸಿದ್ಧಾರ್ಥ್ ಬ್ರೇಕಪ್..
ಬಾಲಿವುಡ್ ನಲ್ಲಿ ಮತ್ತೊಂದು ಜೋಡಿ ಬ್ರೇಕಪ್ ಮಾಡಿಕೊಂಡಿದೆ.
ಕೆಲವು ದಿನಗಳ ಹಿಂದೆ ಲಿಗರ್ ಬ್ಯೂಟಿ ಅನನ್ಯ ತನ್ನ ಗೆಳೆಯ ಇಶಾನ್ ಖಟ್ಟರ್ ಜೊತೆಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು.
ಇದೀಗ ಮತ್ತೊಂದು ಸುಂದರ ಜೋಡಿ ತಮ್ಮ ಸಂಬಂಧಕ್ಕೆ ಎಂಡ್ ಕಾರ್ಡ್ ಹಾಕಿದ್ದಾರೆ.
ಬಾಲಿವುಡ್ ನ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರಾ ಬ್ರೇಕಪ್ ಇದೀಗ ಹಾಟ್ ಟಾಪಿಕ್ ಆಗಿಬಿಟ್ಟಿದೆ.

ಕೆಲ ದಿನಗಳಿಂದ ಡೇಟಿಂಗ್ ನಡೆಸುತ್ತಿರುವ ಈ ಜೋಡಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.
ಆದರೆ ಏನಾಯ್ತೋ ಗೊತ್ತಿಲ್ಲ ಇದೀಗ ಇಬ್ಬರೂ ದೂರವಾಗಿದ್ದಾರೆ ಅನ್ನೋ ಮಾಹಿತಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಇದರ ಜೊತೆಗೆ ಕಿಯಾರಾ ಬ್ರೇಕಪ್ ಸುದ್ದಿ ನಿಜ ಎಂದು ಆಕೆಯ ಆಪ್ತರು ಸ್ಪಷ್ಟಪಡಿಸಿದ್ದಾರೆ.
ಶೇರ್ ಷಾ ಚಿತ್ರದ ಮೂಲಕ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಿದ ಕಿಯಾರಾ ಮತ್ತು ಸಿದ್ಧಾರ್ಥ್, ಚಿತ್ರದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು.
ಅಂದಿನಿಂದ, ಡೇಟಿಂಗ್, ಪಾರ್ಟಿ ಅಂತಾ ಸುತ್ತಾಡುತ್ತಿದ್ದರು.
kiara-advani-and-sidharth-malhotra-breakup