ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವುದಕ್ಕಾಗಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಿದ್ಧತೆ ನಡೆಸಿದ್ದಾರೆ. ಸುದೀಪ್ ಅವರ ಅಕ್ಕ ಸುಜಾತಾ ಪುತ್ರ ಸಂಚಿತ್ ಸಂಜೀವ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕೆಪಿ ಶ್ರೀಕಾಂತ್ ಒಡೆತನದ ವಿನಸ್, ಲಹರಿ ಹಾಗೂ ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ಸಂಚಿತ್ ನಟನೆ ಮಾಡಿದ್ದಾರೆ. We Are The Same ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಸಂಚಿತ್, ಅಂಬಿ ನಿಂಗೆ ವಯಸ್ಸಾಯ್ತೋ, ವಿಕ್ರಾಂತ್ ರೋಣ ಸಿನಿಮಾದಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ್ದಾರೆ.
ಸದ್ಯ ಮುಂಬಯಿನಲ್ಲಿ ನಟನೆಯ ತರಬೇತಿ ಹೊಂದಿರುವ ಅವರು ಚಂದನವನ ಪ್ರವೇಶಿಸುತ್ತಿದ್ದಾರೆ. ಜೂನ್ 15ರಂದು ಅದ್ದೂರಿಯಾಗಿ ಇವರ ಹೊಸ ಚಿತ್ರದ ಮುಹೂರ್ತ ನಡೆಯಲಿದ್ದು, ನಾಳೆ ಕಿಚ್ಚ ಸುದೀಪ್ ಅಧಿಕೃವಾಗಿ ಚಿತ್ರದ ಹೆಸರು ಘೋಷಣೆ ಮಾಡಲಿದ್ದಾರೆ. ಸಂಜೀವ್ ಚೊಚ್ಚಲ ಚಿತ್ರದಲ್ಲಿಯೇ ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.








