ಟೆಲ್ ಅವಿವ್: ಇಸ್ರೇಲ್ ರಾತ್ರಿ ವೇಳೆ ದಾಳಿ ನಡೆಸಿ ಹಮಾಸ್‌ನ (Hamas Commander ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್‌ನ ಕಮಾಂಡರ್ ಮಾಧತ್ ಮುಬ್ಶರ್ ಎಂಬಾತನನ್ನು ಹತ್ಯೆ ಮಾಡಿದೆ.
ಗಾಜಾ ಪಟ್ಟಿಯಲ್ಲಿ (Gaza) ಹಮಾಸ್ ಉಗ್ರರ 25 ಕ್ಕೂ ಹೆಚ್ಚು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅಲ್ಲದೇ, ‘ಹಮಾಸ್‌ನ ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್ ಕಮಾಂಡರ್ ಮಧತ್ ಮುಬಾಶರ್ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಇಸ್ರೇಲ್ ಸೈನಿಕರು, ಹಮಾಸ್ ಸುರಂಗಗಳು, ಕಮಾಂಡ್ ಸೆಂಟರ್‌ಗಳು, ರಾಕೆಟ್ ಉಡಾವಣಾ ಸ್ಥಾನಗಳು ಮತ್ತು ಡಜನ್‌ಗಟ್ಟಲೇ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ರಾತ್ರೋರಾತ್ರಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್‌ನ ಜೆನಿನ್ ವಿಭಾಗದಲ್ಲಿ ಫೀಲ್ಡ್ ಕಮಾಂಡರ್ ಆಗಿದ್ದ ಐಸರ್ ಮೊಹಮ್ಮದ್ ಅಲ್-ಅಮೆರ್‌ನ ಹತ್ಯೆ ಮಾಡಿರುವುದು ದೃಢ ಎಂದಿ ಐಡಿಎಫ್ ಹೇಳಿದೆ.








