RCB | ಚಾಲೆಂಜರ್ಸ್ ಕೋಟೆಗೆ ‘ಕಿಂಗ್’ ಎಂಟ್ರಿ..!
ಆರ್ ಸಿಬಿ ಕ್ಯಾಂಪ್ ಸೇರಿದ ವಿರಾಟ್ ಕೊಹ್ಲಿ
ಮುಂಬೈಗೆ ಬಂದಿಳಿದ ಆರ್ ಸಿಬಿಯ ಮಾಜಿ ನಾಯಕ
ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿದ ಕೊಹ್ಲಿ
ವಿರಾಟ್ ಕೊಹ್ಲಿಗೆ ವೆಲ್ ಕಮ್ ಹೇಳಿದ ಆರ್ ಸಿಬಿ
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಲ್ಲಾ ತಂಡಗಳು ನೆಟ್ಸ್ ಗಳಲ್ಲಿ ಬೆವರಿಳಿಸುತ್ತಿದ್ದಾರೆ. ಅದರಂತೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈಗಾಗಲೇ ತಾಲೀಮು ಶುರು ಮಾಡಿದೆ.
ಹೊಸ ನಾಯಕ, ಹೊಸ ಕೋಚ್ ನೇತೃತ್ವದಲ್ಲಿ ರೆಡ್ ಅಂಡ್ ಗೋಲ್ಡ್ ಗ್ಯಾಂಗ್, ಬೋಲ್ಡ್ ಪ್ರಾಕ್ಟೀಸ್ ಶುರು ಮಾಡಿದೆ. ಇದೀಗ ಈ ಆರ್ ಸಿಬಿ ಕ್ಯಾಂಪ್ ಗೆ ಮಾಜಿ ನಾಯಕ ಕಿಂಗ್ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಪತ್ನಿ ಮತ್ತು ಮಗಳ ಜೊತೆ ಕಾಲ ಕೂಡ ಕಳೆದಿದ್ದರು.
ಇದೀಗ ವಿರಾಟ್ ಕೊಹ್ಲಿ ಚಾಲೆಂಜರ್ಸ್ ಕೋಟೆ ಸೇರಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ ಮೆಂಟ್ ರಾಯಲ್ ಆಗಿಯೇ ವಿರಾಟ್ ಕೊಹ್ಲಿ ಅವರನ್ನ ವೆಲ್ ಕಮ್ ಮಾಡಿದೆ. ಕಿಂಗ್ ಕೊಹ್ಲಿಯ ಆಗಮನ.. ಇದು ಸುದ್ದಿ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಜಾಲ ತಾಣದಲ್ಲಿ ವಿರಾಟ್ ಫೋಟೋ ಜೊತೆ ಶೇರ್ ಮಾಡಿಕೊಂಡಿದೆ.
ಇನ್ನು ಈ ಬಾರಿ ವಿರಾಟ್ ಕೊಹ್ಲಿ ತಂಡದ ನಾಯಕರಾಗಿ ಅಲ್ಲದೇ ಸಾಮಾನ್ಯ ಆಟಗಾರರಾಗಿ ತಂಡದಲ್ಲಿ ಇರಲಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ವಿಶ್ವ ರೂಪ ಹೇಗೆ ಇರಲಿದೆ ಅನ್ನೋದು ಎಲ್ಲರ ಕುತೂಹಲವಾಗಿದೆ. King Kohli has arrived at RCB camp