KKR vs GT match | ಕೆಕೆಆರ್ ತಂಡ Probable XIs
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ಮಧ್ಯಹ್ನಾ 3 : 30ಕ್ಕೆ ಪಂದ್ಯ ನಡೆಯಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆರೋನ್ ಪಿಂಚ್ 58 ರನ್, ಶ್ರೇಯಸ್ ಅಯ್ಯರ್ 85 ರನ್ ಗಳಿಸಿದ್ದರು.
ಕೆಕೆಆರ್ ತಂಡದಲ್ಲಿ ಆತ್ಮವಿಶ್ವಾಸ ಚೆನ್ನಾಗಿಲ್ಲ. ತಂಡಕ್ಕೆ ಆರಂಭಿಕರ ಕೊರತೆ ಎದ್ದು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ನರೈನ್ ಇನ್ನಿಂಗ್ಸ್ ಆರಂಭಿಸಿದ್ರೂ ಯಾವುದೇ ಪ್ರಯೋಜನೆ ಆಗಲಿಲ್ಲ. ಇತ್ತ ವೆಂಕಟೇಶ್ ಅಯ್ಯರ್ ಹಿಂಬಡ್ತಿ ಪಡೆದು ಕಳೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರು. ಆದ್ರೆ ಮತ್ತೆ ವೈಫಲ್ಯ ಅನುಭಿವಿಸಿದರು. ಇದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಗೆ ಕೋಕ್ ನೀಡುವ ಸಾಧ್ಯತೆಗಳಿವೆ.
ಇನ್ನು ಆ್ಯರೋನ್ ಫಿಂಚ್. ನಾಯಕ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಸ್ಪೋಟಕ ಟಚ್ ನಲ್ಲಿದ್ದಾರೆ. ಬೌಲಿಂಗ್ ವಿಚಾರಕ್ಕೆ ಬಂದರೇ ವರುಣ್ ಚಕ್ರವರ್ತಿ ಮಿಸ್ಟ್ರಿ ಕಳೆದು ಹೋಗಿರುವುದು ಬೌಲಿಂಗ್ ನಲ್ಲಿ ಹೊಡೆತ ಕೊಟ್ಟಿದೆ. ಉಮೇಶ್ ಯಾದವ್ ಅಬ್ಬರ ಆರಂಭಿಕ ಪಂದ್ಯಗಳಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಬೌಲಿಂಗ್ ನಲ್ಲಿ ಸುನೀಲ್ ನರೈನ್ ಮತ್ತು ಪ್ಯಾಟ್ ಕಮಿನ್ಸ್ ಉತ್ತಮ ಆಟ ಆಡಬೇಕು. ಉಮೇಶ್ ಲಯ ಕಂಡುಕೊಳ್ಳಬೇಕು. ಶಿವಂ ಮಾವಿ, ರಸೆಲ್ ಮತ್ತು ವರುಣ್ ಚಕ್ರವರ್ತಿ ರನ್ ಕಡಿಮೆ ಕೊಡಲೇಬೇಕಿದೆ. 5ನೇ ಬೌಲರ್ ಕೊರತೆ ಕೆಕೆಆರ್ ತಂಡವನ್ನು ಕಾಡುತ್ತಿದೆ.
ಪ್ಲೇಯಿಂಗ್ ಇಲೆವೆನ್ :
ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಆರನ್ ಫಿಂಚ್, ಶ್ರೇಯಸ್ ಅಯ್ಯರ್ (ಸಿ), ಸುನಿಲ್ ನರೈನ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್ (ವಿಕೆ), ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಇಂದಿನ ಪಂದ್ಯ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆಯಲಿದ್ದು, ಬೌಂಡರಿ ಸಿಕ್ಸರ್ ಗಳ ಸುರಿಯಲಿದೆ. KKR vs GT match | KKR Team Probable XIs