ಡೆಲ್ಲಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಕೆಕೆಆರ್
ದುಬೈ : 14ನೇ ಆವೃತ್ತಿಯ ಐಪಿಎಲ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ಬಾರಿಯ ಐಪಿಎಲ್ ನ ಫೈನಲ್ ನಲ್ಲಿ ಬಲಿಷ್ಠ ಚೆನ್ನೆöÊ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಬುಧವಾರ ನಡೆದ ಕ್ವಾಲಿಫೈಯರ್ ಮ್ಯಾಚ್ ನಲ್ಲಿ ಡೆಲ್ಲಿ ವಿರುದ್ಧ ಕೊಲ್ಕತ್ತಾ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ.
ಫೈನಲ್ ಗೆ ಪ್ರವೇಶಿಸಲು 136 ರನ್ ಟಾರ್ಗೆಟ್ ಪಡೆದ ಕೆಕೆಆರ್ ಗೆ ಉತ್ತಮ ಆರಂಭ ಸಿಕ್ಕಿತು.
ಆರಂಭಿಕ ಜೋಡಿ ಮೊದಲ ವಿಕೆಟ್ ಗೆ 96 ರನ್ (74 ಎಸೆತ) ಜೊತೆಯಾಟವಾಡಿತು. ಅಂತಿಮವಾಗಿ ಕೋಲ್ಕತ್ತಾ ತಂಡ 19. 5 ಓವರ್ ಗಳಲ್ಲಿ 136 ರನ್ ಸಿಡಿಸಿ ಜಯ ಗಳಿಸಿತು.
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 55 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್). ಶುಭಮನ್ ಗಿಲ್ 46 ರನ್ (46 ಎಸೆತ, 1 ಬೌಂಡರಿ 1 ಸಿಕ್ಸ್) ಗಳಿಸಿ ಔಟ್ ಆದ್ರು.
ಅಂತಿಮ ಓವರ್ ನಲ್ಲಿ 6 ಬಾಲ್ ಗೆ 7 ರನ್ ಬೇಕಾಗಿತ್ತು. ಅಶ್ವಿನ್ ಎಸೆದ ಓವರ್ ನ ಮೊದಲ ಎಸೆತ ತ್ರಿಪಾಠಿ ಒಂದು ರನ್ ತೆಗೆದರೆ, 2 ಬಾಲ್ ಡಾಟ್, 3ನೇ ಬಾಲ್ ಶಕೀಬ್ ಔಟ್ ಆದರೆ, 4 ನೇ ಎಸೆತದಲ್ಲಿ ನರೈನ್ ಔಟ್. ಕಡೆಯ 2 ಎಸೆತದಲ್ಲಿ 6 ರನ್ ಬೇಕಾಗಿತ್ತು.
ಈ ವೇಳೆ ರಾಹುಲ್ ತ್ರಿಪಾಠಿ 5ನೇ ಎಸತವನ್ನು ಸಿಕ್ಸರ್ ಸಿಡಿಸಿ ರೋಚಕ ಜಯ ತಂದು ಕೊಟ್ಟರು. ಈ ಮೂಲಕ ಕೆಕೆಆರ್ ತಂಡ ಫೈನಲ್ ಗೆ ಪ್ರವೇಶಿಸಿತು.
ಇನ್ನು ಇದಕ್ಕು ಮುನ್ನಾ ಟಾಸ್ ಸೋತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿತು.
ಡೆಲ್ಲಿ ಪರ ಪೃಥ್ವಿ ಶಾ 18 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್ ಮತ್ತು ಶಿಖರ್ ಧವನ್ 36 ರನ್ (39 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
ನಂತರ ಕ್ರೀಸ್ ಗೆ ಬಂದ ಬ್ಯಾಟರ್ ಗಳನ್ನು ಕೆಕೆಆರ್ ಬೌಲರ್ ಗಳು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲು ಬಿಡಲೇ ಇಲ್ಲ.
ಸ್ಟೋಯ್ನಿಸ್ 18 ರನ್, ಶಿಮ್ರಾನ್ ಹೆಟ್ಮಾಯೆರ್ 17 ರನ್, ಶ್ರೇಯಸ್ ಅಯ್ಯರ್ ಅಜೇಯ 30 ರನ್ ನೆರವಿನಿಂದ ಡಿಸಿ ಮೊತ್ತ 130 ಗಡಿದಾಟಿತು.