ಕೆ ಎಂ ಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ಭಾವಚಿತ್ರ…..
ಕನ್ನಡದ ರಾಜ ರತ್ನ ಪುನೀತ್ ರಾಜ್ ಕುಮಾರ್ ತಂದೆಯಂತೆ ಆದರ್ಶಗಳನ್ನ ಮೈಗೂಡಿಸಿಕೊಂಡು ಅವರಂತೆ ಬದುಕಿದವರು. ರಾಜ್ ಒಂದು ರುಪಾಯಿಯನ್ನು ಪಡೆಯದೆ ನಂದಿನಿ ಹಾಲಿನ ಬ್ರಾಂಡ್ ಗೆ ರಾಯಭಾರಿಯಾಗಿದ್ದರು. ಪುನೀತ್ ರಾಜ್ಕುಮಾರ್ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಕೆಎಂಎಫ್ ನಂದಿನಿ ಹಾಲಿನ ರಾಯಭಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ನಂದಿನಿ ಹಾಲಿನಲ್ಲಿ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಚಿತ್ರವನ್ನ ಪ್ರಿಂಟ್ ಮಾಡುವ ಮೂಲಕ ಕೆಎಂಎಫ್ ವಿಶೇಷ ಗೌರವ ಸೂಚಿಸಿದೆ. 2021 ರ ಕೊನೆಯ ದಿನವಾದ ಇಂದು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರವನ್ನ ಮುದ್ರಿಸಿ ಗೌರವ ಸೂಚಿಸಿದ್ದಾರೆ. ಇದು ಕೋಟ್ಯಂತರ ಅಪ್ಪು ಅಭಿಮಾನಿಗಳಿಗೆ ಸಂತೋಷಕ್ಕೆ ಕಾರಣವಾಗಿದೆ.
ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಚಿತ್ರತಂಡದಿಂದ ಹೊಸ ವರ್ಷಕ್ಕೆ ಪುನೀತ್ ರಾಜ್ಕುಮಾರ್ ಇರುವ ಪೋಸ್ಟರ್ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.