Kodagu ಕೊಡಗು | ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರು ಸಾವು
ಮಡಿಕೇರಿ : ಜಲಪಾತದ ವೀಕ್ಷಣೆಗೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ನಡೆದಿದೆ. ದಿವ್ಯಾ ಮತ್ತು ಶಶಿಕುಮಾರ್ ಮೃತದುರ್ದೈವಿಗಳಾಗಿದ್ದಾರೆ.
ವಾರಾಂತ್ಯವಾದ್ದರಿಂದ ಮಲ್ಲಳ್ಳಿ ಜಲಪಾತಕ್ಕೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಆರು ಜನರ ತಂಡ ಜಲ ಪ್ರವಾಸಕ್ಕೆ ಬಂದಿದ್ದರು.
ಈ ವೇಳೆ ಭಾರಿ ಕುತೂಹಲದಿಂದ ಹತ್ತಿರದಿಂದ ಜಲಪಾತದ ವೀಕ್ಷಣೆ ಮಾಡುವ ಸಮಯದಲ್ಲಿ ದಿವ್ಯಾ ಜಲಪಾತದ ಕೆಳಕ್ಕೆ ಬೀಳುತ್ತಿದ್ದನ್ನ ಗಮನಿಸಿದ ಶಶಿಕುಮಾರ್, ಆಕೆಯನ್ನ ರಕ್ಷಿಸಲು ಹೋಗಿ ನೀರುಪಾಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೋಮವಾರಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದ ಸದಸ್ಯರ ಅಕ್ರಂದನ ಮಗಿಲು ಮುಟ್ಟಿದೆ.